ಮಾನವೀಯತೆ ಮರೆತ ಜನ...

Humanity forgotten people ...!

15-02-2018

ಮೈಸೂರು: ಮಾರಣಾಂತಿಕ ಹಲ್ಲೆ ನಡೆದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕ ಕಾಪಾಡಿ ಎಂದು ಬೇಡಿಕೊಂಡರೂ ಕೇವಲ ಮಾತಾಡಿಕೊಂಡು ನಿಂತ ಜನ ಮಾನವೀಯತೆ ಮರೆತಿದ್ದಾರೆ. ಮೈಸೂರಿನ ದಡದಕಲ್ಲಹಳ್ಳಿಯಲ್ಲಿ ಕ್ಷಲ್ಲಕ ಕಾರಣಕ್ಕೆ ಯುವಕರ ನಡುವೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಇದರಲ್ಲಿ ತೀವ್ರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವನೊರ್ವ ಒದ್ದಾಡುತ್ತಿದ್ದು, ಆಗಲ್ಲ ಸಾಯುತ್ತಿದ್ದೇನೆ ಎಂದು ನರಳಾಡುತ್ತಿದ್ದರೂ ಆತನನ್ನು ಕಾಪಾಡುವ ಗೋಜಿಗೆ ಹೋಗದ ಸ್ಥಳೀಯರು ಆತನನ್ನೇ ನಿಂದಿಸುತ್ತಾ ನಿಂತಿದ್ದರು.

ಅರ್ಧ ಗಂಟೆಗೂ ಹೆಚ್ಚುಕಾಲ ಗೋಳಾಡಿದರೂ ಯಾರೋಬ್ಬರೂ ರಕ್ಷಣೆಗೆ ಮುಂದಾಗಿಲ್ಲ. ನಿನ್ನನ್ನು ಜಗಳ ಮಾಡು ಎಂದು ಹೇಳಿದ್ದು ಯಾರು, ನಮ್ಮ ಗ್ರಾಮಕ್ಕೆ ಕೆಟ್ಟ ಹೆಸರು ತರಲು ಬಂದೆಯಾ ಎಂದು ನಿಂದಿಸಿದ್ದಾರೆ. ಕೊನೆಗೂ ಪರಿಸ್ಥಿತಿಯನ್ನರಿತ ಕೆಲವರು ಗಾಯಾಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 


ಸಂಬಂಧಿತ ಟ್ಯಾಗ್ಗಳು

Iavala mysore Hospital ಮಾನವೀಯತೆ ಜಗಳ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ