ಲಾರಿ ಪಲ್ಟಿ ನಾಲ್ವರ ದುರ್ಮರಣ

4 died in Lorry accident

15-02-2018

ಹೈದರಾಬಾದ್: ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಲಾರಿ ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದು 45 ಜನರಿಗೆ ಗಂಭೀರ ಗಾಯಗಳಾಗಿವೆ. ನಾರಾಯಣಮ್ಮ, ವಿಜಯ್, ಆದೆಪ್ಪ, ವೆಂಕಟರಮಣಪ್ಪ ಮೃತ ದುರ್ದೈವಿಗಳು. ಮೃತರೆಲ್ಲರೂ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದವರೆಂದು ತಿಳಿದು ಬಂದಿದೆ. ‌ಗಂಗಮ್ಮ ಅಕ್ಕಯ್ಯಗಾರು ದೇವಸ್ಥಾನಕ್ಕೆಂದು ನಾಲ್ಕು ಲಾರಿಗಳಲ್ಲಿ ಸುಮಾರು 200 ಜನ ಭಕ್ತರು ತೆರಳಿದ್ದರು. ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಒಂದು ಲಾರಿ ಪಲ್ಟಿಯಾಗಿದೆ.  ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

lorrey prakashm ದೇವಸ್ಥಾನ ಲಾರಿ ಪಲ್ಟಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ