ಫರಿದಾಬಾದ್‌ನಲ್ಲಿ ಕೃಷಿ ಭೂಮಿ ಖರೀದಿ ಹಿನ್ನೆಲೆ ಸ್ಪಷ್ಟನೆ ನೀಡಿದ ಪ್ರಿಯಾಂಕ ಗಾಂಧಿ

Kannada News

28-04-2017

ನವದೆಹಲಿ : ಹರ್ಯಾಣದ ಫರಿದಾಬಾದ್‌ನಲ್ಲಿರುವ ಕೃಷಿ ಭೂಮಿ ತನ್ನ ಪತಿ ರಾಬರ್ಟ್ ವಾದ್ರಾ ಅವರಿಂದ ಬಂದಿದ್ದಲ್ಲ ಬದಲಾಗಿ ಅದನ್ನು ತಾವು ಖರೀದಿ ಮಾಡಿದ್ದು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕ ಗಾಂಧಿ ಹೇಳಿದ್ದಾರೆ.

ಪತಿ ರಾಬರ್ಟ್ ವಾದ್ರಾ ಅವರ ಹಣಕಾಸಿನ ವಿಷಯಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲ. ಸ್ಕೈಲೈಟ್ ಆತಿಥ್ಯ ಸಂಸ್ಥೆ ಅಥವಾ ಡಿಎಲ್‌ಎಫ್ ಸಂಸ್ಥೆಗಳಲ್ಲಿ ನಾನೂ ಭಾಗಿದಾರಳೂ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಡಿಎಲ್‌ಎಫ್ ಸಂಸ್ಥೆಯಿಂದ ಬಂದ ಹಣದಲ್ಲಿ ಫರಿದಾಬಾದ್‌ನಲ್ಲಿ ಕೃಷಿ ಭೂಮಿ ಖರೀದಿ ಮಾಡಿಲ್ಲ. ಈ ಬಗ್ಗೆ ಎದ್ದಿರುವ ಆರೋಪಗಳಲ್ಲಿ ಸತ್ಯಾಂಶಗಳೂ ಇಲ್ಲ. ಇದು ಆಧಾರ ರಹಿತವಾದದ್ದು ಎಂದು ಪ್ರಿಯಾಂಕ ಗಾಂಧಿ ಕಛೇರಿ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ