ಕೆಆರ್ಎಸ್ ಸುತ್ತಮುತ್ತ ಪೊಲೀಸ್ ಭದ್ರತೆ

14-02-2018
ಬೆಂಗಳೂರು: ಕೆಆರ್ಎಸ್ ಜಲಾಶಯದಿಂದ ಕಾವೇರಿ ನೀರು ಬಿಡಲು ರಾಜ್ಯ ಸರ್ಕಾರ ನಿರಾಕರಿಸಿದ ಹಿನ್ನೆಲೆಯಲ್ಲಿ ತಮಿಳುನಾಡಿನ ಅಧಿಕಾರಿಗಳು ಜಲಾಶಯ ಪರಿಶೀಲನೆ ನಡೆಸಲಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಗೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಕೆ.ಆರ್.ಎಸ್.ನಿಂದ ತಮಿಳುನಾಡಿಗೆ ಹೆಚ್ಚುವರಿಯಾಗಿ ನೀರು ಬಿಡಬೇಕೆಂದು ತಮಿಳುನಾಡು ಸರ್ಕಾರ, ರಾಜ್ಯಕ್ಕೆ ಪತ್ರ ಬರೆದು ಮನವಿ ಮಾಡಿತ್ತು. ಆದರೆ ಇದನ್ನು ನಿರಾಕರಿಸಿದ ರಾಜ್ಯ ಸರ್ಕಾರ, ನಮಗೆ ನೀರಿಲ್ಲ, ನಿಮಗೆ ಎಲ್ಲಿಂದ ನೀರು ಬಿಡುವುದು ಎಂದು ಹೇಳಿತ್ತು. ಆದರೆ, ಮಹದಾಯಿ ನದಿ ಪಾತ್ರಕ್ಕೆ ಗೋವಾ ಸರ್ಕಾರದ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿದ ಮಾದರಿಯಲ್ಲೇ, ತಮಿಳುನಾಡು ಸರ್ಕಾರದ ಪ್ರತಿನಿಧಿಗಳು ಕೆಆರ್ಎಸ್ ಜಲಾಶಯಕ್ಕೆ ಬಂದು ನೀರಿನ ಪ್ರಮಾಣವನ್ನು ನೋಡುವ ಸಾಧ್ಯತೆ ಇದೆ.
ಕೆಆರ್ಎಸ್ ಡ್ಯಾಂ ಪರಿಶೀಲನೆಗೆ ತಮಿಳುನಾಡು ಅಧಿಕಾರಿಗಳು ಭೇಟಿ ನೀಡಲಿದ್ದಾರೆ ಎಂಬ ಊಹಾಪೋಹಗಳ ನಡುವೆ ಜಲಾಶಯದ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಕೆಆರ್ಎಸ್ ಸುತ್ತಮುತ್ತ ಸಂಚರಿಸುವ ತಮಿಳುನಾಡು ನೋಂದಣಿ ವಾಹನಗಳನ್ನು ತಪಾಸಣೆ ಮಾಡಿ ಬಿಡಲಾಗುತ್ತಿದೆ. ಅಲ್ಲದೆ, ಕರ್ನಾಟಕಕ್ಕೆ ಬಂದು ಇಲ್ಲಿ ಬಾಡಿಗೆ ವಾಹನ ಪಡೆದು ಜಲಾಶಯಕ್ಕೆ ಅಧಿಕಾರಿಗಳು ಭೇಟಿ ನೀಡುವ ಸಾಧ್ಯತೆಯನ್ನು ಪೊಲೀಸರು ತಳ್ಳಿ ಹಾಕಿಲ್ಲ. ಕೃಷ್ಣರಾಜ ಸಾಗರ ಜಲಾಶಯದ ಬಳಿ ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿಕೊಂಡು ತೀವ್ರ ತಪಾಸಣೆಯಲ್ಲಿ ತೊಡಗಿದ್ದಾರೆ.
ಕರ್ನಾಟಕ, ಬೇಸಿಗೆಯನ್ನು ಗಮನದಲ್ಲಿಟ್ಟುಕೊಂಡು ಇತಮಿತವಾಗಿ ನೀರು ಬಳಸಿ, ನೀರು ಉಳಿಸಿಕೊಂಡಿದ್ದರೆ, ತನ್ನ ಪಾಲಿನ ನೀರನ್ನು ಪಡೆದು ಅದನ್ನು ಬೇಕಾಬಿಟ್ಟಿ ಖರ್ಚು ಮಾಡಿ ಮತ್ತೆ ನಮ್ಮ ನೀರಲ್ಲಿ ಪಾಲು ಕೇಳುವುದು ಹಿಂದಿನಿಂದಲೂ ನಡೆದು ಬಂದ ತಮಿಳುನಾಡಿನ ದುಂಡಾವರ್ತನೆಯಾಗಿದೆ.
ಒಂದು ಕಮೆಂಟನ್ನು ಹಾಕಿ