ಮೆಟ್ರೊಗೆ ಮತ್ತೆ ಮೂರು!

Another 3 compartments for bengaluru metro train

14-02-2018

ಬೆಂಗಳೂರು: ನಮ್ಮ ಮೆಟ್ರೊ ರೈಲಿನ ಜನಸಂದಣಿ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ, ಈಗಿರುವ ರೈಲುಗಳಿಗೆ 3 ಹೆಚ್ಚುವರಿ ಬೋಗಿಗಳನ್ನು ಸೇರಿಸಲು ಬಿ.ಎಮ್.ಆರ್.ಸಿ.ಎಲ್ ನಿರ್ಧರಿಸಿದೆ. ಮೊದಲ ಹಂತದಲ್ಲಿ ಬಿಇಎಂಎಲ್ ಕಾರ್ಖಾನೆಯಿಂದ ಮೂರು ಬೋಗಿಗಳನ್ನು ಹಸ್ತಾಂತರಿಸಲಾಗಿದೆ.

ಬಿಇಎಂಎಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಬೋಗಿಗಳನ್ನು ಹಸ್ತಾಂತರ ಮಾಡಲಾಯಿತು. ಈ ವೇಳೆ ನಮ್ಮ ಮೆಟ್ರೊ ಎಂ.ಡಿ ಮಹೇಂದ್ರ ಜೈನ್ ಉಪಸ್ಥಿತರಿದ್ದರು. ಮಾರ್ಚ್ ಅಂತ್ಯದಲ್ಲಿ ಪರೀಕ್ಷಾ ಕಾರ್ಯ ಮತ್ತಿತರ ಸುರಕ್ಷತಾ ವ್ಯವಸ್ಥೆಗಳ ಪರಿಶೀಲನೆ ನಡೆಯಲಿದೆ. ಆ ನಂತರ, ರೈಲ್ವೆ ಸುರಕ್ಷತಾ ಆಯುಕ್ತರ ಅನುಮತಿ ಪಡೆದು ಈ ಬೋಗಿಗಳನ್ನು ರೈಲಿಗೆ ಜೋಡಿಸಲಾಗುತ್ತದೆ. ಪ್ರತಿ ರೈಲಿಗೆ ಈಗಿರುವ ಬೋಗಿಗಳೊಂದಿಗೆ ಹೆಚ್ಚುವರಿಯಾಗಿ 3 ಬೋಗಿಗಳು ಸೇರ್ಪಡೆಯಾದರೆ ಒಂದೇ ಬಾರಿ 2 ಸಾವಿರ ಜನ ಪ್ರಯಾಣಿಸಬಹುದಾಗಿದೆ.


ಸಂಬಂಧಿತ ಟ್ಯಾಗ್ಗಳು

Metro train ಆಯುಕ್ತ ಅನುಮತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ