ಕಡಿಗೇಡಿಗಳ ದಾಂಧಲೆ..!

23 vehicles window glasses destroyed : case filed

14-02-2018

ಬೆಂಗಳೂರು: ಬನಶಂಕರಿ ಹಾಗೂ ಚೆನ್ನಮ್ಮನ ಕೆರೆಯ ಅಚ್ಚುಕಟ್ಟುವಿನಲ್ಲಿ ಕಿಡಿಗೇಡಿಗಳು 18 ಕಾರು ಸೇರಿ 23 ವಾಹನಗಳನ್ನು ಕಲ್ಲಿನಿಂದ ಜಖಂಗೊಳಿಸಿ ಪರಾರಿಯಾಗಿದ್ದಾರೆ.

ಬನಶಂಕರಿಯ ತ್ಯಾಗರಾಜನಗರದ ಭೈರಪ್ಪ ಕಾಲೋನಿಯಲ್ಲಿ ರಸ್ತೆ ಬದಿ, ಮನೆಯ ಮುಂಭಾಗ ನಿಲ್ಲಿಸಿದ್ದ 13 ಕಾರುಗಳು, 3 ಟೆಂಪೋ, 2 ಆಟೋಗಳ ಮೇಲೆ ಕಲ್ಲು ತೂರಾಟ ನಡೆಸಿ ಗಾಜುಗಳನ್ನು ಪುಡಿಗೈದಿದಾರೆ.  ಭೈರಪ್ಪ ಕಾಲೋನಿಯ ಪಕ್ಕದ ರಸ್ತೆಯಲ್ಲಿರುವ ಚೆನ್ನಮ್ಮನಕೆರೆ ಅಚ್ಚುಕಟ್ಟುವಿನ ಭೋವಿ ಕಾಲೋನಿಯಲ್ಲಿ ನಿಲ್ಲಿಸಿದ್ದ 5 ಕಾರು, 1 ಆಟೋವನ್ನು ಕಲ್ಲಿನಿಂದ ಜಖಂಗೊಳಿಸಲಾಗಿದೆ. ಮುಂಜಾನೆ 2 ರಿಂದ 3ರ ಸುಮಾರಿನಲ್ಲಿ ಈ ಕೃತ್ಯ ನಡೆದಿದ್ದು, ಕಲ್ಲು ತೂರಾಟದಿಂದ ಎಲ್ಲ 23 ವಾಹನಗಳಿಗೆ ಹಾನಿಯುಂಟಾಗಿದೆ.

ಕುಡಿದ ಮತ್ತಿನಲ್ಲಿ ಕಿಡಿಗೇಡಿಗಳು ಈ ಕೃತ್ಯನಡೆಸಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳ ಪತ್ತೆಗೆ ಬನಶಂಕರಿ ಹಾಗೂ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರನ್ನೊಳಗೊಂಡ 3 ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ದಕ್ಷಿಣ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Car and Auto Broken ಚೆನ್ನಮ್ಮ ಜಖಂ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ