ಮುಂದುವರೆದ ಸರಗಳ್ಳರ ಹಾವಳಿ

Again 2 chain snatch cases filed in bengaluru

14-02-2018

ಬೆಂಗಳೂರು: ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರೆದಿದ್ದು, ಸುಬ್ರಮಣ್ಯ ನಗರ ಹಾಗೂ ಮಲ್ಲೇಶ್ವರಂನಲ್ಲಿ ಇಬ್ಬರು ಮಹಿಳೆಯರ ಮಾಂಗಲ್ಯಸರವನ್ನು ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದಾರೆ. ಸುಬ್ರಮಣ್ಯ ನಗರದ ರಾಮಮೋಹನ ಪುರದ ಬಳಿ ರಾತ್ರಿ 8.30ರ ವೇಳೆ ನಡೆದುಕೊಂಡು ಹೋಗುತ್ತಿದ್ದ ಹೇಮಾವತಿ ಅವರ ಕತ್ತಿನಲ್ಲಿದ್ದ 60 ಗ್ರಾಂ. ಮಾಂಗಲ್ಯ ಸರವನ್ನು ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಿತ್ತೊಯ್ದಿದ್ದಾರೆ.

ಮಲ್ಲೇಶ್ವರಂನ ಹೇಮಾವತಿ ಅವರು ರಾಮಮೋಹನ ಪುರದಲ್ಲಿ ನಡೆಸುತ್ತಿದ್ದ ಅಂಗಡಿಗೆ ಬೀಗ ಹಾಕಿಕೊಂಡು ದೇವಯ್ಯ ಪಾರ್ಕ್‍ನ ಬಸ್ ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಇದಾದ ಕೇವಲ 1 ಗಂಟೆಯೊಳಗೆ ಮಲ್ಲೇಶ್ವರಂನ 11ನೇ ಕ್ರಾಸ್‍ನ 8ನೇ ಮುಖ್ಯರಸ್ತೆಯಲ್ಲಿ ಮನೆ ಸಾಮಾನುಗಳನ್ನು ಪಕ್ಕದ ಮನೆಗೆ ಸಾಗಿಸುತ್ತಿದ್ದ ರಾಜಲಕ್ಷ್ಮಿ ಎಂಬ ಮಹಿಳೆಯ 40ಗ್ರಾಂ ಚಿನ್ನದ ಸರವನ್ನು ದುಷ್ಕರ್ಮಿಯೊಬ್ಬ ಕಸಿದು ಪರಾರಿಯಾಗಿದ್ದಾನೆ. ಎರಡೂ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಬ್ರಮಣ್ಯ ನಗರ ಮತ್ತು ಮಲ್ಲೇಶ್ವರಂ ಪೊಲೀಸರು ದೂರು ದಾಖಲಿಸಿಕೊಂಡು, ಕಳ್ಳರಿಗಾಗಿ ತೀವ್ರ ಶೋಧ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

chain snatch Gold ಸರಗಳ್ಳ ಪೊಲೀಸರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ