ಜಂಪಿಂಗ್ ಸ್ಟಾರ್ ಪುಟ್ಟಣ್ಣ..!

Jumping star puttanna..!

14-02-2018

ಬೆಂಗಳೂರು: ಜೆಡಿಎಸ್ ಬಂಡಾಯ ಶಾಸಕ ಪುಟ್ಟಣ್ಣಗೆ ಬಿಜೆಪಿಯಿಂದ ಬುಲಾವ್ ಬಂದಿದೆ ಎನ್ನಲಾಗಿದೆ. ಜೆಡಿಎಸ್ ವಿರುದ್ಧ ಬಂಡೆದ್ದು ಕಾಂಗ್ರೆಸ್ ಸಖ್ಯ ಬೆಳೆಸಿದ್ದ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ಸಿಗುವುದೋ ಇಲ್ಲವೋ ಎಂಬ ಗೊಂದಲ ಮುಂದುವರೆದಿದೆ. ಪುಟ್ಟಣ್ಣಗೆ ರಾಮನಗರ ಅಥವಾ ಚನ್ನಪಟ್ಟಣದಲ್ಲಿ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಸೂಚಿಸಿದ್ದು, ಡಿಕೆಶಿ ಅವರೂ ಪುಟ್ಟಣ್ಣ ಅಲ್ಲೇ ಸ್ಪರ್ಧಿಸಲಿ ಎಂದು ಒತ್ತಾಯಿಸಿದ್ದಾರಂತೆ. ಆದರೆ, ಇವೆರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಪುಟ್ಟಣ್ಣ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಮನಗರದಿಂದ ಕುಮಾರಸ್ವಾಮಿ, ಚೆನ್ನಪಟ್ಟಣದಿಂದ ಅನಿತಾ ಕುಮಾರಸ್ವಾಮಿ ಕಣದಲ್ಲಿರುವುದರಿಂದ ಹಿಂಜರಿಯುತ್ತಿರುವ ಪುಟ್ಟಣ್ಣ, ಬೆಂಗಳೂರಿನ ಆರ್.ಆರ್.ನಗರ ಅಥವ ಯಶವಂತಪುರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಜೊತೆಗೂ ಪುಟ್ಟಣ್ಣ ಸಂಬಂಧ ಹಳಸಿದರೆ ಅವರನ್ನು ತಮ್ಮ ಕಡೆಗೆ ಸೆಳೆಯಲು ಬಿಜೆಪಿ ನಾಯಕರು ಮುಂದಾಗಿದ್ದಾರಂತೆ.

ಈಗಾಗಲೇ ಪುಟ್ಟಣ್ಣ ಜೊತೆ ಮಾತುಕತೆ ನಡೆಸಿರುವ ಬಿಜೆಪಿ ಮುಖಂಡ ಆರ್.ಆಶೋಕ್, ವಿಜಯನಗರ, ಗೋವಿಂದರಾಜನಗರ, ಅಥವಾ ಯಶವಂತಪುರದಿಂದ ಬಿಜೆಪಿ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಅಂತಿಮ ಕ್ಷಣದವರೆಗೂ ಪ್ರಯತ್ನ ಮುಂದುವರೆಸಲು ತೀರ್ಮಾನಿಸಿರುವ ಪುಟ್ಟಣ್ಣ, ಒಂದು ವೇಳೆ ಕಾಂಗ್ರೆಸ್ ನಲ್ಲಿ ವರ್ಕ್ ಔಟ್ ಆಗದಿದ್ದರೆ ಬಿಜೆಪಿಯತ್ತ ವಾಲಬಹುದು ಎಂದು ಹೇಳಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

JDS puttanna election ತೀರ್ಮಾನ ಆಕಾಂಕ್ಷಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ