ಕಿಲಾಡಿ ಕಳ್ಳರು 

fake job websites..!

14-02-2018

ಬೆಂಗಳೂರು: ನಿರುದ್ಯೋಗಿ ಯುವಕರೇ ಎಚ್ಚರ, ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ದೋಚುವ ಹಲವು ನಕಲಿ ವೆಬ್ ಸೈಟುಗಳು ತಲೆ ಎತ್ತಿವೆ. ಉದ್ಯೋಗದ ಹುಡುಕಾಟದಲ್ಲಿರುವವರು ತಮ್ಮ ವೆಬ್ ಸೈಟ್ ನಲ್ಲಿ ದಾಖಲಿಸುವ ನಂಬರ್ ಪಡೆಯುವ ಈ ವಂಚಕರ ಜಾಲ ಅವರಿಗೆ ಕರೆ ಮಾಡುತ್ತದೆ, ಬಳಿಕ ಫೋನ್ ಮೂಲಕವೇ ಸಂದರ್ಶನದ ನಾಟಕ ಮಾಡಿ, ಇಂಟರ್ ನೆಟ್ ಮೂಲಕವೇ ಆಫರ್ ಲೆಟರ್ ನೀಡುತ್ತಾರೆ.

ಆ ಬಳಿಕ ವೀಸಾ ಹಾಗೂ ಮೆಡಿಕಲ್ ಚಾರ್ಜ್ ಹೆಸರಲ್ಲಿ ನಯವಾಗಿ ಹಣ ಕೀಳುತ್ತಾರೆ. ಒಮ್ಮೆ ಹಣ ಅವರ ಕೈ ಸೇರುತ್ತಿದ್ದಂತೆ ಅಸಲಿ ಬಣ್ಣ ತೋರಿಸುವ ಈ ವಂಚಕರು ಕೈಗೆ ಸಿಗದಂತೆ ಮಾಯವಾಗುತ್ತಾರೆ. ಇವರ ಜಾಲಕ್ಕೆ ಸಿಲುಕಿದವರು, ಇತ್ತ ಹಣವೂ ಹೋಯಿತು ಅತ್ತ ಉದ್ಯೋಗವೂ ಇಲ್ಲ ಎನ್ನುವಂತಾಗುತ್ತಾರೆ. ಅಮೆರಿಕದಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ ಹಣ ಲಪಟಾಯಿಸಿದ ವೆಬ್ ಸೈಟ್ ವಿರುದ್ಧ ಮಹೇಶ್ ಎಂಬುವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ