ಯತ್ನಾಳ್ ಬಂದ್ರೆ ಖುಷಿ

Ramesh Jigajinagi raction on basavaraj patil yatnal

14-02-2018

ವಿಜಯಪುರ: ವಿಧಾನ ಪರಿಷತ್ತಿನ ಪಕ್ಷೇತರ ಸದಸ್ಯ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಬಿಜೆಪಿ ಸೇರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಪ್ರತಿಕ್ರಿಯಿಸಿದ್ದಾರೆ. ವೈಯಕ್ತಿಕವಾಗಿ ನಾನು ಯತ್ನಾಳ್ ಅವರನ್ನು ಯಾವತ್ತೂ ವಿರೋಧ ಮಾಡಿಲ್ಲ, ಅವರು ಬಿಜೆಪಿಗೆ ವಾಪಸ್ ಬರುವುದಾದರೆ ಸ್ವಾಗತಿಸುತ್ತೇನೆ ಎಂದಿದ್ದಾರೆ.

ನಾನು ಜನತಾದಳದಲ್ಲಿದ್ದಾಗ ಯತ್ನಾಳ್ ಬಿಜೆಪಿ ಶಾಸಕರಾಗಿದ್ದರು, ಆಗಲೂ ಸಹ ಅವರ ಕ್ಷೇತ್ರದ ಅಭಿವೃದ್ಧಿಗಾಗಿ ನೆರವಾಗಿದ್ದೇನೆ, ರಾಜಕಾರಣದಲ್ಲೂ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ, ಯತ್ನಾಳ್ ಕುಟುಂಬಕ್ಕೂ ನನಗೂ ಇರುವ ಬಾಂಧವ್ಯ ಮತ್ಯಾರಿಗೂ ಇಲ್ಲ ಎಂದು ಸಚಿವ ಜಿಗಜಿಣಗಿ ಹೇಳಿದರು. ಯತ್ನಾಳ್ ಅಣ್ಣ ಈಶ್ವರ್ ಗೌಡ ನನ್ನ ಆತ್ಮೀಯ ಸ್ನೇಹಿತ, ತನ್ನ ತಮ್ಮನನ್ನು ರಾಜಕೀಯವಾಗಿ ಬೆಳೆಸುವಂತೆ ನನಗೆ ಹೇಳಿದ್ದರು, ಹೀಗಾಗಿ ಎಂದಿಗೂ ನಾನು ಯತ್ನಾಳ್ ಗೆ ವಿರೋಧ ಮಾಡಿಲ್ಲ, ಮಾಡುವುದೂ ಇಲ್ಲ ಎಂದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ