ದರೋಡೆಗೆ ಸಜ್ಜಾಗಿದ್ದ ರೌಡಿ ಅರೆಸ್ಟ್

Rowdy and his gang arrested

13-02-2018

ಬೆಂಗಳೂರು: ವಿದ್ಯಾರಣ್ಯಪುರದ ಡಿಫೆನ್ಸ್ ಲೇಔಟ್ ಬಳಿ ದರೋಡೆಗೆ ಸಜ್ಜಾಗಿದ್ದ ಕುಖ್ಯಾತ ರೌಡಿ ಶ್ರೀಕಾಂತ ಅಲಿಯಾಸ್ ಊಸಾನ ಹಾಗೂ ಆತನ ಮೂವರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಿದ್ಯಾರಣ್ಯಪುರದ ಊಸಾನ (26), ತೇಜಸ್ ಅಲಿಯಾಸ್ ತೇಜು (25), ವಿದ್ಯಾರಣ್ಯಪುರದ ರಾಘವೇಂದ್ರ ಕಾಲೋನಿಯ ಲೋಕೇಶ್ ಅಲಿಯಾಸ್ ಲೋಕಿ (20), ಮಲ್ಲೇಶ್ವರಂನ ಆರೀಫ್ (20) ಬಂಧಿತ ಆರೋಪಿಗಳು.

ಬಂಧಿತರಲ್ಲಿ ತೇಜಸ್ ಹಾಗೂ ಲೋಕೇಶ್ ವಿದ್ಯಾರಣ್ಯಪುರ ಠಾಣೆಯ ಸಿ ರೌಡಿ ಪಟ್ಟಿಯಲ್ಲಿದ್ದು, ಇವರ ವಿರುದ್ಧ ದರೋಡೆ ಯತ್ನ, ಹಲ್ಲೆ, ಸುಲಿಗೆ ಪ್ರಕರಣಗಳು ದಾಖಲಾಗಿವೆ. ಆರೋಪಿಗಳು ಡಿಫೆನ್ಸ್ ಲೇಔಟ್‍ನ ಬಳಿ ಒಂಟಿಯಾಗಿ ಓಡಾಡುವವರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಲು ಸಜ್ಜಾಗಿದ್ದಾಗ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಮಚ್ಚು, ಲಾಂಗು ಇನ್ನಿತರ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rowdy Arrest ಡಿಫೆನ್ಸ್ ಸಿಸಿಬಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ