ಜಿ ಎಸ್ ಟಿ ಸರಳವಾಗಿರಬೇಕಿತ್ತು…

GST was supposed to be simple ...

13-02-2018

ಕಲಬುರಗಿ: ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಜಿ ಎಸ್ ಟಿ ಮತ್ತಷ್ಟು ಸರಳಗೊಳಿಸಿ, ಒಂದೇ ಹಂತದ ತೆರಿಗೆ ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಉದ್ಯಮಿಗಳೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ, ಪರಿಣಾಮಗಳ ಬಗ್ಗೆ ಆಲೋಚಿಸದೆ 130 ಕೋಟಿ ಜನರ ಮೇಲೆ ಜಿ ಎಸ್ ಟಿ ಹೇರಲಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಜಿ ಎಸ್ ಟಿ ಯಿಂದ ಜನರು ಎದುರಿಸುತ್ತಿರುವ ಗೊಂದಲಗಳನ್ನು ನಿವಾರಿಸಲಾಗುವುದು ಎಂದು ಹೇಳಿದರು.
ಜಿ ಎಸ್ ಟಿಯಲ್ಲಿ ಸರಳತೆ ಇರಬೇಕು ಮತ್ತು ಬಡವರು ಮತ್ತು ಅತಿ ಹೆಚ್ಚು ಜನ ಬಳಸುವ ವಸ್ತುಗಳ ಮೇಲೆ ಒಂದೇ ರೀತಿಯ ತೆರಿಗೆ ಇರಬೇಕು ಎನ್ನುವುದು ಕಾಂಗ್ರೆಸ್ ಪಕ್ಷದ ನಿಲುವು, ಹೀಗಾಗಿ ಐದು ಹಂತದ ತೆರಿಗೆ ಸರಿಯಲ್ಲ ಎಂದು ಕಾಂಗ್ರೆಸ್ ಪಕ್ಷ ವಾದಿಸುತ್ತಿದೆ, ಆದರೆ ಮೋದಿ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ರಾಹುಲ್ ಗಾಂಧಿ ಆಪಾದಿಸಿದರು.

ಪೂರ್ಣಪ್ರಮಾಣದಲ್ಲಿ ಜಿ ಎಸ್ ಟಿ ಜಾರಿ ಮುನ್ನ ಪ್ರಾಯೋಗಿಕ ಕ್ರಮಗಳನ್ನು ಕೈಗೊಳ್ಳಿ, ಇಲ್ಲವಾದಲ್ಲಿ ಇದು ದುರಂತವಾಗಲಿದೆ ಎಂದು ಮೊದಲೇ ಎಚ್ಚರಿಸಿದ್ದರೂ ಮೋದಿ ಸರ್ಕಾರ ನಮ್ಮ ಮಾತನ್ನು ಗಮನಕ್ಕೆ ತೆಗೆದುಕೊಳ್ಳಲಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಪ್ರಧಾನಿ ಮೋದಿ ಮಧ್ಯರಾತ್ರಿಯಲ್ಲಿ  ಜಿ ಎಸ್ ಟಿ ಜಾರಿಗೊಳಿಸಲು ತೀರ್ಮಾನಿಸಿದ್ದಾರೆ, ಈಗ ಏನೂ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಅರುಣ್ ಜೇಟ್ಲಿ ಹೇಳಿದ್ದರು, ಹೀಗಾಗಿ ನಾವು ಅಸಹಾಯಕರಾಗಬೇಕಾಯಿತು ಎಂದು ರಾಹುಲ್ ಗಾಂಧಿ ಹೇಳಿದರು.


ಸಂಬಂಧಿತ ಟ್ಯಾಗ್ಗಳು

Rahul gandhi GST ಬಡವರು ಉದ್ಯಮಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ