ಬಾಲಕರ ಮೇಲೆ ಆಸಿಡ್ ದಾಳಿ

13-02-2018 428
ತುಮಕೂರು: ಪಾರ್ಕಿನಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ದುಷ್ಕರ್ಮಿಗಳು ಆಸಿಡ್ ಎರಚಿ ಪರಾರಿಯಾಗಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಘಟನೆ ನಡೆದಿದ್ದು, ದರ್ಶನ್(10), ವಿನಯ್ (4) ಆಸಿಡ್ ದಾಳಿಗೊಳಗಾದ ಬಾಲಕರು. ಘಟನೆಯಲ್ಲಿ ಮಕ್ಕಳ ಮುಖ ಮತ್ತು ತಲೆಗೆ ಗಾಯಗಳಾಗಿದ್ದು, ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಕರಿಬ್ಬರು ತಿಪಟೂರು ನಿವಾಸಿ ಆನಂದ್ ಎಂಬುವರ ಮಕ್ಕಳೆಂದು ತಿಳಿದು ಬಂದಿದೆ. ತಿಪಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
ಒಂದು ಕಮೆಂಟನ್ನು ಹಾಕಿ