ಭಗಂಡೇಶ್ವರ ಸನ್ನಿದಿಯಲ್ಲಿ ಶಿವರಾತ್ರಿ

Mahashivratri in bhagandeshwara temple madikeri

13-02-2018

ಮಡಿಕೇರಿ: ಇಂದು ಮಹಾಶಿವರಾತ್ರಿ ಹಿನ್ನೆಲೆ ಮಡಿಕೇರಿಯ ಭಾಗಮಂಡಲದ ಭಗಂಡೇಶ್ವರ ಸನ್ನಿದಿಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಬೆಳಿಗ್ಗೆ 6.30ಕ್ಕೆ ಶುರುವಾದ ಶತರುದ್ರಾಭಿಷೇಕ ಹೋಮ 9ಗಂಟೆ ವರೆಗೂ ನಡೆಯಿತು. ಮೈಸೂರಿನ ಪ್ರಕಾಶ್ ಭಟ್ ತಂಡದವರು ರುದ್ರ ಹೋಮವನ್ನು ನಡೆಸಿಕೊಟ್ಟರು. ನಂತರ ಮಹಾ ಪೂಜೆ, ದೇವ ಬಲಿ ಪೂಜಾ ಕಾರ್ಯಕ್ರಮಗಳು ನಡೆದವು. ಕಳೆದ 25 ವರ್ಷದಿಂದ ನಾಪೋಕ್ಲು, ಕೊಳಕೇರಿ, ಪಾರಣೆ, ಕಡೆಯಿಂದ ಬರುವಂತೆ ಈ ವರ್ಷವೂ ಆಗಮಿಸಿದ ಭಕ್ತಾಧಿಗಳು ಬಂದು ಕಾವೇರಿ ಮಾತೆಯ ಕೃಪೆಗೆ ಪಾತ್ರರಾದರು. ಇಂದು ಸಂಜೆ ವೇದಿಕೆ ಕಾರ್ಯಕ್ರಮಗಳು ಜರುಗಲಿದ್ದು, ದೇವಸ್ಥಾನದ ವ್ಯವಸ್ಥಾಕ ಸಮಿತಿ ಅಧ್ಯಕ್ಷರಾದ ಬಿದ್ದಾಟಂಡ ತಮ್ಮಯ್ಯನವರ ನೇತೃತ್ವದಲ್ಲಿ ನಡೆಯಲಿವೆ.


ಸಂಬಂಧಿತ ಟ್ಯಾಗ್ಗಳು

bhagandeshwara Mahashivratri ಕೈಂಕರ್ಯ ವೇದಿಕೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ