ಎಟಿಎಂಗೆ ಕೈ ಹಾಕಿದವನ ಬಂಧನ

Tried to ATM Robbery one arrested

13-02-2018

ಬೆಂಗಳೂರು: ಎಟಿಎಂ ಕೇಂದ್ರಕ್ಕೆ ನುಗ್ಗಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಗಸ್ತಿನಲ್ಲಿದ್ದ ಕಾಮಾಕ್ಷಿಪಾಳ್ಯ ಪೊಲೀಸರು ರೆಡ್‍ಹ್ಯಾಂಡ್ ಆಗಿ ಹಿಡಿದಿದ್ದಾರೆ. ಕಾಮಾಕ್ಷಿಪಾಳ್ಯದ ಕೊಟ್ಟಿಗೆಪಾಳ್ಯ ಬಸ್ ನಿಲ್ದಾಣದ ಬಳಿ ಇರುವ ಆಕ್ಸಿಸ್ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ಇಂದು ಮುಂಜಾನೆ 3.30ರ ವೇಳೆ ಇಬ್ಬರು ದುಷ್ಕರ್ಮಿಗಳು ನುಗ್ಗಿದ್ದು, ಅದರಲ್ಲಿ ಒಬ್ಬ ಹೊರಗಡೆ ನಿಂತಿದ್ದ.

ಒಳನುಗ್ಗಿದ್ದ ಆರೋಪಿಯೊಬ್ಬ ಎಟಿಎಂನಲ್ಲಿರುವ ಹಣ ದೋಚಲು ಯಂತ್ರವನ್ನು ಒಡೆಯುತ್ತಿದ್ದಾಗ ಅದೇ ಮಾರ್ಗದಲ್ಲಿ ಬಂದ ಕಾಮಾಕ್ಷಿಪಾಳ್ಯ ಠಾಣೆಯ ಎ.ಎಸ್.ಐ. ರಾಜಣ್ಣ ಮತ್ತು ಅವರ ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕೊಟ್ಟಿಗೆಪಾಳ್ಯದ ಹರೀಶ್ (35) ಎಂದು ಗುರುತಿಸಲಾಗಿದ್ದು, ಈತ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಹೊಂಚುಹಾಕುತ್ತಿದ್ದ ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಅನುಚೇತ್ ತಿಳಿಸಿದ್ದಾರೆ. ಆರೋಪಿ ಹರೀಶ್ ಖಾಸಗಿ ಕಂಪನಿಯೊಂದರಲ್ಲಿ ಎಟಿಎಂ ಹಣ ತುಂಬಿಸುವ ಕೆಲಸ ಮಾಡುತ್ತಿದ್ದು, ಎಟಿಎಂ ಯಂತ್ರಗಳನ್ನು ಬಿಚ್ಚುವ ಬಗ್ಗೆ ತಿಳಿದುಕೊಂಡು ಈ ಕೃತ್ಯಕ್ಕೆ ಕೈ ಹಾಕಿರುವುದು ತನಿಖೆಯಲ್ಲಿ ಕಂಡು ಬಂದಿದೆ.

 


ಸಂಬಂಧಿತ ಟ್ಯಾಗ್ಗಳು

ATM machine ಆರೋಪಿ ಸಿಬ್ಬಂದಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ