'ರಾಜಭೂಮಿ'ಯಲ್ಲಿ ಅಕ್ರಮ ಗಣಿಗಾರಿಕೆ

baby betta illegal mining case: hand over to Lokayukta

13-02-2018

ಮೈಸೂರು: ಮೈಸೂರು ರಾಜಮನೆತನದವರ ಖಾಸಗಿ ಆಸ್ತಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿರುವ ಪ್ರಕರಣ ಇದೀಗ ಲೋಕಾಯುಕ್ತರ ಅಂಗಳ ತಲುಪಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಡಿಪಿಎಆರ್), ಈ ಪ್ರಕರಣವನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿದೆ. ಅಕ್ರಮ ಗಣಿಗಾರಿಕೆ ಕುರಿತು ಆರ್.ಟಿ.ಐ ಕಾರ್ಯಕರ್ತ ರವೀಂದ್ರ ದೂರು ನೀಡಿದ್ದರು. ಪಾಂಡವಪುರದ ಬೇಬಿ ಬೆಟ್ಟದಲ್ಲಿ, ಮೈಸೂರು ರಾಜವಂಶಸ್ಥರ ಒಡೆತನಕ್ಕೆ ಸೇರಿದ ಸರ್ವೆನಂಬರ್ 1ರಲ್ಲಿ, ಸಂಸದ ಪುಟ್ಟರಾಜು ಸೇರಿದಂತೆ ಹಲವು ಪ್ರಭಾವಿಗಳ ಕಂಪನಿಗಳಿಂದ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂದು ರಾಜ್ಯಪಾಲರಿಗೆ ದೂರು ನೀಡಿದ್ದರು.


ಸಂಬಂಧಿತ ಟ್ಯಾಗ್ಗಳು

Mining Lokayukta ರಾಜವಂಶಸ್ಥ ಆರ್.ಟಿ.ಐ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ