ಭಕ್ತರಿಗೆ ನಿರಾಸೆ..!

Devotees disappointed..!

13-02-2018

ಬೆಂಗಳೂರು: ಇಂದು ಮಹಾಶಿರಾತ್ರಿ ಪ್ರಯುಕ್ತ ನಾಡಿನೆಲ್ಲೆಡೆ ಸಂಭ್ರಮದಿಂದ ವಿಶೇಷ ಪೂಜಾ ಕೈಂಕರ್ಯಗಳು ನೆರವೇರುತ್ತಿದ್ದರೇ, ಬೆಂಗಳೂರು ಗ್ರಾಮಾಂತರ ನೆಲಮಂಗಲದ ಮುಕ್ತಿನಾಥೇಶ್ವರ ದೇವಾಲಯಲ್ಲಿ ಭಕ್ತರಿಗೆ ನಿರಾಸೆಯಾಗಿದೆ. ಪ್ರತಿವರ್ಷ ಮುಕ್ತಿನಾಥೇಶ್ವರ ದೇವಾಲಯಲ್ಲಿ ಸೂರ್ಯರಶ್ಮಿ ಸ್ಪರ್ಶವಾಗುತ್ತಿತ್ತು, ಮುಂಜಾನೆ 6:41 ರಿಂದ 7:15 ಮಧ್ಯೆ ಸೂರ್ಯರಶ್ಮಿ ಸ್ಪರ್ಶವಾಗಬೇಕಿತ್ತು. ಆದರೆ ಬದಲಾದ ವಾತಾವರಣದಿಂದ ಸೂರ್ಯನ ಕಿರಣಗಳು ಸ್ಪರ್ಶವಾಗಿಲ್ಲ. ಸೂರ್ಯರಶ್ಮಿ ವೀಕ್ಷಿಸಲು ಸಾಲುಸಾಲು ಭಕ್ತರು ಕಾತರದಿಂದ ಕಾದು ಕುಳಿತಿದ್ದರು. ಆದರೆ ಸೂರ್ಯರಶ್ಮಿ ಸ್ಪರ್ಶವಾಗದ ಹಿನ್ನೆಲೆ ಪೂಜೆ ಸಲ್ಲಿಸಿ ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Mahashivarathri Shiva ನಿರಾಸೆ ಸೂರ್ಯರಶ್ಮಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ