29 ಬೈಕ್: 6 ಮಂದಿ ಆರೋಪಿಗಳು

bike theft gang arrested

12-02-2018 459

ಬೆಳಗಾವಿ: ಬೆಳಗಾವಿಯ ಚಿಕ್ಕೂಡಿ ಪೋಲಿಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಜಿಲ್ಲೆಯ ವಿವಿಧೆಡೆ ಬೈಕ್ಗಳನ್ನು ಕದಿಯುತ್ತಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. 29 ಬೈಕ್ಗಳ ಸಮೇತ 6 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಸುಮಾರು 10ಲಕ್ಷ ಮೌಲ್ಯದ ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಿರಜ್ ತಾಲ್ಲೂಕಿನ ಕರಣ ಬಾಗಡಿ ಪ್ರಮುಖ ಆರೋಪಿಯಾಗಿದ್ದು, ಉಳಿದ ಐವರು ರಾಯಭಾಗದ ಬಬ್ಲು ಪಠಾಣ, ರಾಘವೇಂದ್ರ ಮಾನೆ, ಅಪ್ಪಯ್ಯ ಕೆಸರಕೊಪ್ಪ, ಸದ್ಧಾಂ ಪಠಾಣ, ಸಂತೋಷ್ ಬಂಧಿತರು. ಪಿಎಸ್ಐ ಸಂಗಮೇಶ ಹೊಸಮನಿ, ಸಿಪಿಐ ಎಂ.ಎಸ್ ನಾಯ್ಕರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Bike Robbery ಪಿಎಸ್ಐ ಆರೋಪಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ