ರಾಮ್ ಜೀ ಗ್ಯಾಂಗ್ ಸರೆ

Ramji gang arrested by police

12-02-2018

ಬೆಂಗಳೂರು: ಗಮನ ಬೇರೆಡೆ ಸೆಳೆದು ಚಿನ್ನಾಭರಣ, ಮೊಬೈಲ್ ಲ್ಯಾಪ್ ಟಾಪ್ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದ ಕುಖ್ಯಾತ ಅಂತರರಾಜ್ಯ ರಾಮ್ ಜೀ ಗ್ಯಾಂಗ್ ಮಾಸ್ಟರ್ ಮೈಂಡ್ ಸತ್ಯನಾರಾಯಣ ಸೇರಿ ಐವರನ್ನು ಜಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾಲೂರಿನ ಸತ್ಯನಾರಾಯಣ ಅಲಿಯಾಸ್ ಸತ್ಯ (44), ಶಿವ ವೆಂಕಟೇಶ್ ಅಲಿಯಾಸ್ ಕೂಕ(45), ವೆಂಕಟೇಶ(48), ಪಶ್ಚಿಮ ಬಂಗಾಳದ ಕಡಕ್‍ಪುರ್‍ ನ ರವಿಕುಮಾರ್ ಅಲಿಯಾಸ್ ರವಿ(40) ಬಂಧಿತ ಆರೋಪಿಗಳು. ಬಂಧಿತರಿಂದ 3.60 ಲಕ್ಷ ರೂ ನಗದು, 24 ಗ್ರಾಂ ಚಿನ್ನದ ಒಡವೆ, 1 ಲ್ಯಾಪ್‍ಟಾಪ್ ಒಟ್ಟು 5 ಲಕ್ಷ ರೂ ಮೌಲ್ಯದ ಮಾಲನ್ನು ವಶಪಡಿಸಿಕೊಂಡು ದಕ್ಷಿಣ ವಿಭಾಗದ 10 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ ಎಂದು ಉಪಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ತಿಳಿಸಿದ್ದಾರೆ.

ಆರೋಪಿಗಳು ದೊಡ್ಡ ಮಾಲ್‍ಗಳು, ಕಾಂಪೆಕ್ಸ್, ಜನಸಂದಣಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಾರ್ ಪಾರ್ಕಿಂಗ್ ಸ್ಥಳ, ಬ್ಯಾಂಕ್‍ಗಳ ಬಳಿ ಬಂದು 10 ರೂಗಳ ನೋಟನ್ನು ರಸ್ತೆಯಲ್ಲಿ ಬಿಸಾಡಿ, ರಸ್ತೆಯ ಮೇಲೆ ನಿಮ್ಮ ಹಣ ಬಿದ್ದಿದೆ ಎಂದು ಅವರ ಗಮನವನ್ನು ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದರು.


ಸಂಬಂಧಿತ ಟ್ಯಾಗ್ಗಳು

Robbery arrest ಬ್ಯಾಂಕ್‍ ಜನಸಂದಣಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ