ಸಿದ್ದರಾಮಯ್ಯರಿಂದ ಬಿಜೆಪಿಗೆ ಹೆಲ್ಪ್!12-02-2018

ಮಡಿಕೇರಿ: ರಾಹುಲ್ ಗಾಂಧಿ ಚುನಾವಣಾ ಪ್ರಚಾರ ಮಾಡಿದ ಕಡೆಗಳಲ್ಲೆಲ್ಲ ಕಾಂಗ್ರೆಸ್ ಪಕ್ಷ ತಳಮಟ್ಟಕ್ಕೆ ಹೋಗಿದೆ, ಹೀಗಾಗಿ ಅವರನ್ನು ಕರ್ನಾಟಕಕ್ಕೆ ಕರೆಸುವ ಮೂಲಕ ಸಿದ್ದರಾಮಯ್ಯ ಬಿಜೆಪಿಗೆ ಉಪಕಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ಸಂಸದ ಪ್ರತಾಪ ಸಿಂಹ ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಮಹದಾಯಿ ನದಿ ನೀರು ಬಳಕೆ ಬಗ್ಗೆ ಮಾತನಾಡಿದ ಅವರು, ಸೋನಿಯಾ ಗಾಂಧಿಯವರು ಮಹದಾಯಿ ನದಿಯ ಒಂದೇ ಒಂದು ಹನಿ ನೀರು ಬೇರೆಡೆಗೆ ತಿರುಗಿಸುವುದಿಲ್ಲ ಎಂದು ಗೋವಾ ಚುನಾವಣೆ ವೇಳೆ ಹೇಳಿದ್ದರು, ಮಹದಾಯಿ ಸಮಸ್ಯೆಗೆ ಅವರೇ ಮೂಲ ಕಾರಣ ಎಂದು ಆಪಾದಿಸಿದ್ದಾರೆ. 

ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ವಪಕ್ಷಗಳು ಒಪ್ಪಿದರೆ ಮಾತ್ರ ಪ್ರಧಾನಿ ಮಧ್ಯಪ್ರವೇಶ ಮಾಡಬಹುದು, ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಕೂಡ ಇದೇ ಕಾರಣ ನೀಡಿದ್ದರು ಎಂದರು. ಸಿದ್ದರಾಮಯ್ಯನವರು, ಮೊದಲು ಗೋವಾ ಕಾಂಗ್ರೆಸ್ ಅಧ್ಯಕ್ಷ ಶಾಂತಾರಾಮ್ ಅವರ ಬಾಯಿ ಮುಚ್ಚಿಸಲಿ ನೋಡೋಣ ಎಂದು ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Pratap Simha siddaramaiah ಗೋವಾ ಮಹದಾಯಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ