ಹಣ-ಪಾಸ್ ಪೋರ್ಟ್ ಕಸಿದು ಪರಾರಿ

robbery on sri lankan women in bengaluru..!

12-02-2018

ಬೆಂಗಳೂರು: ಬೆಂಗಳೂರಿಗೆ ಬಂದಿದ್ದ ಶ್ರೀಲಂಕಾ ಪ್ರಜೆಯೊಬ್ಬರ ಬಳಿ ದುಷ್ಕರ್ಮಿಗಳು 18 ಸಾವಿರ ರೂ.ಮೌಲ್ಯದ ಶ್ರೀಲಂಕಾ ಕರೆನ್ಸಿ ಹಾಗು ಪಾಸ್ ಪೋರ್ಟ್ ಕಸಿದು ಪರಾರಿಯಾಗಿದ್ದಾರೆ. ಶ್ರೀಲಂಕಾದ ಮಹಮದ್ ಅಜಾಮಿಯಾ ಅವರು, ಪತ್ನಿ ಶಿಯಾ ಜೊತೆ ರಾಜ್ಯ ಪ್ರವಾಸಕ್ಕೆ ಬಂದಿದ್ದು, ನಗರದ ಎಲೆಂಜಾ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದರು. ನಿನ್ನೆ ರಾತ್ರಿ 1.30ರ ವೇಳೆ ರಿಚ್ಮಂಡ್ ವೃತ್ತದ ಎಂಪೈರ್ ಹೋಟೆಲ್‍ನಲ್ಲಿ ಊಟ ಮುಗಿಸಿ ಹತ್ತಿರದ ಎಲೆಂಜಾ ಹೋಟೆಲ್‍ಗೆ ಪತ್ನಿ ಜೊತೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಮಸೀದಿಯ ಬಳಿ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಮಹಮದ್ ಅಜಾಫಿಯಾ ಬಳಿ ಇದ್ದ 18 ಸಾವಿರದ ಶ್ರೀಲಂಕಾ ಕರೆನ್ಸಿ ಹಾಗೂ ಪಾಸ್ ಪೋರ್ಟ್ ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ದೂರು ದಾಖಲಿಸಿರುವ ಅಶೋಕ್ ನಗರ ಪೊಲೀಸರು, ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Sri Lanka Passport ದುಷ್ಕರ್ಮಿ ಪರಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ