ಶ್ರೀಗಂಧ ಕಳ್ಳರ ಗ್ಯಾಂಗ್ ಬಂಧನ

sandalwood thieves arrested

12-02-2018

ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ 10 ಲಕ್ಷ ರೂ.ಮೌಲ್ಯದ 138 ಕೆಜಿ ಗಂಧದ ತುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳೆದ ಕೆಲ ದಿನಗಳಿಂದ ನಗರದ ವಿವಿಧ ಬಡಾವಣೆಗಳಲ್ಲಿ ಟಾಟಾ ಸುಮೋದಲ್ಲಿ ಸುತ್ತಾಡುತ್ತಾ ಮನೆ ಆವರಣ ಹಾಗೂ ಉದ್ಯಾನ ವನಗಳಲ್ಲಿರುತ್ತಿದ್ದ ಶ್ರೀಗಂಧದ ಮರಗಳನ್ನು ಕಳವು ಮಾಡಿ ಮೋಜು ಮಾಡುತ್ತಿದ್ದ ಶ್ರೀಗಂಧ ಕಳ್ಳರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.

ತುಮಕೂರಿನ ಮಹಮದ್ ಇಮ್ರಾನ್ ಅಲಿಯಾಸ್ ಆರೀಫ್ (30), ಕೋತಿತೋಪುವಿನ ಫೈಜುಲ್ಲಾ ಖಾನ್ ಅಲಿಯಾಸ್ ಬಾಬು (48), ಮೇಲುಕೋಟೆಯ ರಂಗಸ್ವಾಮಿ(45), ಹಾಸನದ ಹಿರಿಸಾವೆಯ ಉದಯ್ ಕುಮಾರ್ ಅಲಿಯಾಸ್ ಉದಯ್ (24), ತುಮಕೂರಿನ ಗೂಡ್ಸ್ ಶೆಡ್‍ನ ಶಫಿ ಉಲ್ಲಾ ಅಲಿಯಾಸ್ ಕಾಡುಪಾಪ (39) ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿಗಳ ಬಂಧನದಿಂದ ಬನಶಂಕರಿ, ಬಸವನಗುಡಿಯ ತಲಾ ಒಂದು, ವಿದ್ಯಾರಣ್ಯಪುರದ 2 ಸೇರಿದಂತೆ, 6 ಶ್ರೀಗಂಧದ ಮರಗಳವು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಡಿಸಿಪಿ ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ. ಟಾಟಾ ಸುಮೋದಲ್ಲಿ ಅನುಮಾನಾಸ್ಪದವಾಗಿ ಒಡಾಡುತ್ತಿದ್ದ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಶ್ರೀಗಂಧ ಮರ ಕಳವು ಮಾಡುತ್ತಿರುವುದನ್ನು ಬಾಯ್ಬಿಟ್ಟಿದ್ದಾರೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

sandalwood arrest ವಿಚಾರಣೆ ಶ್ರೀಗಂಧ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ