ಸೌಮ್ಯ ರೆಡ್ಡಿಗೆ ಕಾಂಗ್ರೆಸ್ ಟಿಕೆಟ್ ?

Congress ticket for Soumya Reddy..?

12-02-2018

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳ ರಾಜಕಾರಣಿಗಳು ತಮ್ಮ ಟಿಕೆಟ್‌ ಮತ್ತು ಕ್ಷೇತ್ರಗಳನ್ನು ಭದ್ರ ಪಡಿಸಿಕೊಳ್ಳುವ ತವಕದಲ್ಲಿದ್ದಾರೆ. ಅದೇರೀತಿ ತಮ್ಮ ಮಗ ಅಥವ ಮಗಳನ್ನು ಈ ಬಾರಿ ಕಣಕ್ಕಿಳಿಸುವ ಸಲುವಾಗಿ ಕೆಲವು ರಾಜಕಾರಣಿಗಳು ವರ್ಷಗಳ ಹಿಂದಿನಿಂದಲೇ ತಂತ್ರಗಾರಿಕೆ ರೂಪಿಸುತ್ತಿರುವ ವಿಚಾರವೂ ರಹಸ್ಯವಲ್ಲ. ಇದರಲ್ಲಿ ಪ್ರಮುಖವಾಗಿ ಸಚಿವ ರಾಮಲಿಂಗಾ ರೆಡ್ಡಿಯವರ ಮಗಳು ಸೌಮ್ಯಾ ರೆಡ್ಡಿ ಬೆಂಗಳೂರಿನ ಜಯನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಗಳು ಬಹುತೇಕ ಖಚಿತ ಎನ್ನುವ ಮಾಹಿತಿ ಸೂಪರ್ ಸುದ್ದಿಗೆ ತಲುಪಿದೆ.  ಒಂದು ವೇಳೆ ಪಕ್ಷದೊಳಾಗಾಗಲಿ, ಹೊರಗಾಗಲಿ ಈ ನಿರ್ಧಾರಕ್ಕೆ ಆಕ್ಷೇಪಗಳು ವ್ಯಕ್ತವಾದಲ್ಲಿ ಅದನ್ನು ಎದುರಿಸಲೂ ಕೂಡ ಸಬೂಬುಗಳು ಈಗಾಗಲೇ ಸಿದ್ಧವಾಗಿವೆಯಂತೆ.

ಸೌಮ್ಯ ರೆಡ್ಡಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡುವುದರಲ್ಲಿ ಏನು ತಪ್ಪು? ಅವರು ಹಲವು ವರ್ಷಗಳಿಂದ ಜಯನಗರ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ, ಜೊತೆಗೆ ಪಕ್ಷದಲ್ಲಿ ಹಿಂದೆಯೂ ಶಾಮನೂರು ಶಿವಶಂಕರಪ್ಪನವರ ಮಗ ಮಲ್ಲಿಕಾರ್ಜುನ್, ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಮತ್ತಿತರರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿಲ್ಲವೇ? ಹೀಗಾಗಿ, ಸೌಮ್ಯ ರೆಡ್ಡಿಗೆ ಪಕ್ಷದ ಟಿಕೆಟ್ ಕೊಡುವುದರಲ್ಲಿ ಏನು ತಪ್ಪಿದೆ? ಎಂಬೆಲ್ಲ ಸಮರ್ಥನೆಗಳು ಪ್ರಶ್ನೆಗಳು ಹುಟ್ಟುವ ಮೊದಲೇ ರೆಡಿಯಾಗಿರುವುದು ಸ್ವಾರಸ್ಯಕರವೇ ಹೌದು.


ಸಂಬಂಧಿತ ಟ್ಯಾಗ್ಗಳು

Ramalinga Reddy sowmya reddy ಸಮರ್ಥ ಸಬೂಬು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ