ಕುಟುಂಬ ಕಲಹ ಕೊಲೆಯಲ್ಲಿ ಅಂತ್ಯ

son killed by his own father..!

12-02-2018

ದಕ್ಷಿಣ ಕನ್ನಡ: ಕುಡಿದು ಇಷ್ಟಬಂದಂತೆ ವರ್ತಿಸುತ್ತಿದ್ದ ಮಗನನ್ನು ತಂದೆ ಹಾಗು ಸಹೋದರ ಸೇರಿ ಕೊಲೆ ಮಾಡಿದ್ದಾರೆ. ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಮಟ್ಲ ಗ್ರಾಮದಲ್ಲಿ ನಡೆದಿದೆ. ಕಳೆದ ಡಿಸೆಂಬರ್ 31ರ ತಡರಾತ್ರಿ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ ನವೀನ್ ಮನೆಯಲ್ಲಿ ದಾಂಧಲೆ ಮಾಡಿದ್ದ. ಸಾಲದ್ದಕ್ಕೆ ತಂದೆ ಮತ್ತು ಸಹೋದರರ ಮೇಲೆ ದಾಳಿ ಮಾಡಿ, ಸಿಕ್ಕ ಸಿಕ್ಕ ವಸ್ತುಗಳನ್ನು ಒಡೆದು ಹಾಕಿದ್ದ. ಇದರಿಂದ ತಾಳ್ಮೆ ಕಳೆದುಕೊಳ್ಳದ ಕುಟುಬಂಸ್ಥರ ನಡುವೆ ರಾಜಿ ನಡೆದಿತ್ತು.

ಆದರೆ ತನ್ನ ಚಾಳಿ ಬಿಡದ ನವೀನ್ ನೆನ್ನೆ ರಾತ್ರಿ ಮತ್ತೆ ಕುಡಿದು ಬಂದು ಗಲಾಟೆ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ತಂದೆ ಮಂಜುನಾಥ್ ಹಾಗು ಇನ್ನೊಬ್ಬ ಮಗ ಚೂರಿಯಿಂದ ಇರಿದು ಕೊಲೆಮಾಡಿ ಪರಾರಿಯಾಗಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನೆಡೆದಿದೆ.

 


ಸಂಬಂಧಿತ ಟ್ಯಾಗ್ಗಳು

drunk murder ಒಡೆದು ತಾಳ್ಮೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ