ಟೋಲ್ ಬಳಿ ದಾಂಧಲೆ

toll gate worker Attacked by local leader..!

12-02-2018

ಉಡುಪಿ: ಉಡುಪಿ ರಾಷ್ಟ್ರೀಯ ಹೆದ್ದಾರಿ ಬಳಿ ಶಕ್ತಿ ಕೇಂದ್ರ ಸಂಘಟನೆ ಅಧ್ಯಕ್ಷ ವಿಠಲ್ ಪೂಜಾರಿ ಮತ್ತವರ ಸಹಚರರು ದಾಂಧಲೆ ನಡೆಸಿದ್ದಾರೆ. ಸಾಸ್ತಾನ ರಾಷ್ಟ್ರೀಯ ಹೆದ್ದಾರಿ ಟೋಲ್ ಗೇಟ್ ಬಳಿ ಸೆಕ್ಯೂರಿಟಿ ಗಾರ್ಡ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ವಿಐಪಿ ಮತ್ತು ಆಂಬ್ಯುಲೆನ್ಸ್ ಟ್ರಾಕ್ ನಲ್ಲಿ ನುಗ್ಗಲು ಯತ್ನಿಸಿದ ವಾಹನವನ್ನು ತಡೆದ ಹಿನ್ನೆಲೆ ಟೋಲ್ ಸಿಬ್ಬಂದಿ ಮೇಲೆ ತೀವ್ರ ಹಲ್ಲೆ ಮಾಡಿದ್ದಾರೆ. ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬಂದ ನಾಲ್ವರು ಈ ಕೃತ್ಯ ಎಸಗಿದ್ದಾರೆ. ಹಲ್ಲೆಗೀಡಾದ ವ್ಯಕ್ತಿ ಅಬ್ದುಲ್ ರೆಹಮಾನ್(58) ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 

 


ಸಂಬಂಧಿತ ಟ್ಯಾಗ್ಗಳು

Toll highway ಜಿಲ್ಲಾಸ್ಪತ್ರೆ ವಿಐಪಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ