ದಿಗ್ಗಜರ ನಡುವಿನ ಭಿನ್ನಮತ ನಿವಾರಣೆ?

KPCC and Dissent leaders..?

12-02-2018

ಉತ್ತರ ಕನ್ನಡ: ವಿಧಾನಸಭಾ ಚುನಾವಣೆ ಹಿನ್ನೆಲೆ ಜಿಲ್ಲಾ ಕಾಂಗ್ರೆಸ್ ಮುಖಂಡರ ನಡುವಿನ ಭಿನ್ನಮತ ನಿವಾರಿಸಲು ಕೆಪಿಸಿಸಿ ನಡೆಸಿದ ಕಸರತ್ತು ಸಫಲವಾಗಿದೆ. ಸಚಿವ ಆರ್.ವಿ.ದೇಶಪಾಂಡೆ ಮತ್ತು ಮಾಜಿ ಕೇಂದ್ರ ಸಚಿವೆ ಮಾರ್ಗರೆಟ್ ಆಳ್ವ, ಕಳೆದ 20 ವರ್ಷಗಳಿಂದಲೂ ಪರಸ್ಪರ ರಾಜಕೀಯ ಅಂತರ ಕಾಯ್ದುಕೊಂಡಿದ್ದರು. ಇದರಿಂದ ಜಿಲ್ಲೆಯಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿತ್ತು. ಕಳೆದ ಚುನಾವಣೆಯಲ್ಲೂ ಶಿರಸಿ ಕ್ಷೇತ್ರದಲ್ಲಿ ಕಡಿಮೆ ಅಂತರದ ಸೋಲಾಗಿತ್ತು.

ಚುನಾವಣೆಯಲ್ಲಿ ಉಭಯ ನಾಯಕರು ಪ್ರತ್ಯೇಕವಾಗಿದ್ದರೆ ಪಕ್ಷಕ್ಕೆ ಹಾನಿ ಎಂಬ ಕಾರಣಕ್ಕಾಗಿ ಸಿಎಂ ಸಿದ್ದರಾಮಯ್ಯ ಸಲಹೆಯಂತೆ ಉಭಯ ನಾಯಕರ ಮಧ್ಯೆ ಪರಮೇಶ್ವರ್ ನಡೆಸಿದ ಸಂಧಾನ  ಸಫಲವಾಗಿದೆ. ದೇಶಪಾಂಡೆ ಮತ್ತು ಮಾರ್ಗರೆಟ್ ಆಳ್ವ ನಡುವಿನ ಭಿನ್ನಮತ ಶಮನವಾಗಿರುವುದು ಪಕ್ಷಕ್ಕೆ ಹುರುಪು ತಂದಿದೆ. ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಒಂದಾಗಿ ಕೆಲಸ ಮಾಡುವಂತೆ ಪರಮೇಶ್ವರ್ ಹೇಳಿದ್ದಾರೆ. ಜಿಲ್ಲೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುವುದಾಗಿ ಮಾರ್ಗರೆಟ್ ಆಳ್ವ ಭರವಸೆ ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Margaret Alva R.V.deshpande ಚುನಾವಣೆ ಭಿನ್ನಮತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ