ಬಟ್ಟೆ ವ್ಯಾಪಾರದೊಂದಿಗೆ ವೇಶ್ಯಾವಾಟಿಕೆ..!

Prostitution in the dress shop hubballi

12-02-2018

ಹುಬ್ಬಳ್ಳಿ: ಬಟ್ಟೆ ವ್ಯಾಪಾರದ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಮುಂಡಗೋಡದ ಶಂಕರ ಭೀಮಪ್ಪ ಜಂಬಗಿ(34) ಬಂಧಿತ ಆರೋಪಿ. ಹಣದಾಸೆಗೆ ಬಟ್ಟೆ ವ್ಯಾಪಾರ ಮಾಡುತ್ತಲೇ ಅಂಗಡಿಗೆ ಬರುವವರೊಂದಿದೆ ವ್ಯಾಪಾರ ಕುದುರಿಸಿ, ಹುಬ್ಬಳ್ಳಿಯ ಶಿವಗಿರಿ ಅತ್ತಿಗೇರಿ ಲೇಔಟ್ನಲ್ಲಿ ವೇಶ್ಯಾವಾಟಿಕೆ ದಂಧೆ ನೆಡೆಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ವಿದ್ಯಾನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಭೀಮಪ್ಪನನ್ನು ಬಂಧಿಸಿ, ಪಶ್ಚಿಮ ಬಂಗಾಳ ಮೂಲದ ಓರ್ವ ಮಹಿಳೆಯನ್ನು ರಕ್ಷಿಸಿದ್ದಾರೆ. ಆರೋಪಿ ಭೀಮಪ್ಪನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Prostitution investigation ಮಹಿಳೆ ವ್ಯಾಪಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ