‘ಸೋನಿಯಾ-ರಾಹುಲ್ ಹೋದಲ್ಲೆಲ್ಲ ಬಿಜೆಪಿ ಗೆದ್ದಿದೆ’10-02-2018

ರಾಯಚೂರು: ರಾಹುಲ್ ಗಾಂಧಿ ರಾಜ್ಯ ಪ್ರವಾಸದಿಂದ ಬಿಜೆಪಿಗೆ ಯಾವುದೇ ತೊಂದರೆ ಇಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಬಿಜೆಪಿಯೂ ರಾಹುಲ್ ಗಾಂಧಿಯವರನ್ನು ಸ್ವಾಗತಿಸುತ್ತದೆ ಏಕೆಂದರೆ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹೋದಲ್ಲೆಲ್ಲ ಬಿಜೆಪಿ ಗೆದ್ದಿದೆ ಎಂದು ಯಡಿಯೂರಪ್ಪ ವ್ಯಂಗ್ಯವಾಡಿದರು. ರಾಯಚೂರು ನಗರದಲ್ಲಿ ಶಿವರಾಜ್ ಪಾಟೀಲ್ ಹಾಗೂ ಲಿಂಗಸೂರಿನಲ್ಲಿ ಮಾನಪ್ಪ ವಜ್ಜಲ್ ಗೆ ಬಿಜೆಪಿ ಟಿಕೆಟ್ ನೀಡಲಾಗುವುದು ಎಂದು ಪ್ರಕಟಿಸಿದ ಯಡಿಯೂರಪ್ಪ, ಹೊಸಪೇಟೆಯಲ್ಲಿ ಆನಂದ್ ಸಿಂಗ್ ಗಿಂತ ಉತ್ತಮರಾಗಿರುವ ಅಭ್ಯರ್ಥಿ ಗವಿಯಪ್ಪ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂದರು.


ಸಂಬಂಧಿತ ಟ್ಯಾಗ್ಗಳು

B. S.Yeddyurappa Rahul Gandhi ಟಿಕೆಟ್ ಆನಂದ್ ಸಿಂಗ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ