ಜಾವಡೇಕರ್ ಕನಸು..!10-02-2018

ಚಿತ್ರದುರ್ಗ: ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಉಳಿದುಕೊಂಡಿದ್ದು, ಇಲ್ಲೂ ಕೂಡ ಕಾಂಗ್ರೆಸ್ ಸರ್ಕಾರ ಹೋಗಿ ಬಿಜೆಪಿ ಸರ್ಕಾರ ಬರಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ಮೋದಿ ಸಮಾವೇಶ ಐತಿಹಾಸಿಕ. ಇದು ಕರ್ನಾಟಕದಲ್ಲಿ ಹೊಸ ಭರವಸೆ ಮೂಡಿಸಿದೆ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ನಮ್ಮ ಸಂಸ್ಕೃತಿ, ಕೌಟುಂಬಿಕ ರಾಜಕಾರಣ ಕಾಂಗ್ರೆಸ್ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಕಾರ್ಯಕರ್ತರ ಕೊಲೆಗಳಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುತ್ತಿದೆ, ಕಾಂಗ್ರೆಸ್ ನವರು ಬ್ಯಾಲೆಟ್ ಪಾಲಿಟಿಕ್ಸ್ ಬದಲು ಬುಲೆಟ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ ಎಂದು ದೂರಿದರು. 

‘ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯ ಸರ್ಕಾರದವರು ತಮ್ಮ ಯೋಜನೆಗಳು ಎಂದು ಹೇಳಿಕೊಳ್ಳುತ್ತಿದ್ದಾರೆ. ಅನ್ನಭಾಗ್ಯ ಕಾಂಗ್ರೆಸ್ ನದ್ದಲ್ಲ, ಮೋದಿಯವರದ್ದು’ ಎಂದು ಜಾವಡೇಕರ್ ಹೇಳಿದ್ದಾರೆ. ಚಹಾ ಮಾರುತ್ತಿದ್ದವನು ಪ್ರಧಾನಿ ಆಗುವುದು, ಬಡ ದಲಿತ ಕುಟುಂಬದ ವ್ಯಕ್ತಿ ರಾಷ್ಟ್ರಪತಿ ಆಗುವುದು, ರೈತ ಕುಟುಂಬದ ವ್ಯಕ್ತಿ ಉಪರಾಷ್ಟ್ರಪತಿ ಆಗುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದು ಜಾವಡೇಕರ್ ತಮ್ಮ ಪಕ್ಷವನ್ನು ಸಮರ್ಥಿಸಿಕೊಂಡರು.


ಸಂಬಂಧಿತ ಟ್ಯಾಗ್ಗಳು

Prakash Javadekar congress ಕುಟುಂಬ ಉಪರಾಷ್ಟ್ರಪತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ