ನಕಲಿ ಕೀ ಬಳಸಿ ಕಳ್ಳತನ…

Theft by using fake key..

10-02-2018

ಬೆಂಗಳೂರು: ನಾಗರಭಾವಿಯ ವಿದ್ಯಾಗಿರಿ ಲೇಔಟ್ ನಲ್ಲಿರುವ ಸಾರಿಗೆ ಸಂಸ್ಥೆಯ ಟ್ರಾಫಿಕ್ ಇನ್ಸ್ಪೆಕ್ಟರ್ ಸುರೇಶ್ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಕಳವಾಗಿವೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನಕಲಿ ಕೀ ಬಳಸಿ ಬೀಗ ತೆಗೆದು, ಎರಡು ನೆಕ್ಲೇಸ್, ಐದು ಚಿನ್ನದ ಚೈನು, ಚಿನ್ನದ ಬಳೆ, ಉಂಗುರ ಸೇರಿದಂತೆ, ಸುಮಾರು 9 ಲಕ್ಷ ಮೌಲ್ಯದ ಆಭರಣಗಳನ್ನು ಕದ್ದೊಯ್ಯಲಾಗಿದೆ. ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

theft traffic inspector ಚಿನ್ನಾಭರಣ ತನಿಖೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ