ಪ್ರಾಣತೆಗೆಯಿತೇ ಚುಚ್ಚು ಮದ್ದು?

Mandya: injection killed 2 children

10-02-2018

ಮಂಡ್ಯ: ಅಂಗನವಾಡಿಯಲ್ಲಿ ನೀಡಿದ ಚುಚ್ಚುಮದ್ದು ಪಡೆದ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಮತ್ತು ಇತರೆ 7 ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಘಟನೆ ತಾಲ್ಲೂಕಿನ ಚಿನ್ನಗಿರಿದೊಡ್ಡಿ ಗ್ರಾಮದಲ್ಲಿ ನಡೆದಿದೆ. ಪ್ರೀತಮ್(2) ಮತ್ತು ಭುವನ್(2) ಮೃತಪಟ್ಟಿರುವ ಮಕ್ಕಳು. ಗ್ರಾಮದ ಅಂಗನವಾಡಿಯಲ್ಲಿ 9 ಮಕ್ಕಳಿಗೆ ಚುಚ್ಚುಮದ್ದು ಲಸಿಕೆ ನೀಡಲಾಗಿತ್ತು, ಇದಾದ ಕೆಲವು ಗಂಟೆಗಳ ಬಳಿಕ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಅಸ್ವಸ್ಥರಾಗಿದ್ದ 7 ಮಕ್ಕಳನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳ ಸಾವಿನ ಸುದ್ದಿಯಿಂದ ಸುತ್ತಮುತ್ತಲಿನ ಗ್ರಾಮದ ಜನರೂ ಕೂಡ ಆತಂಕಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

anganavadi injection ಚುಚ್ಚುಮದ್ದು ಆಸ್ಪತ್ರೆಗೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ