ಪರಮೇಶ್ವರ್ ಗೆ ‘ಆನಂದ’..!

we will start another yatra from belagavi: Parameshwara

10-02-2018

ಬಳ್ಳಾರಿ: ಇಂದು ಹೊಸಪೇಟೆಯಲ್ಲಿ ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷದ ಬೃಹತ್ ಜನಾಶೀರ್ವಾದ ಯಾತ್ರೆಗೆ ಚಾಲನೆ ನೀಡುವ ಹಿನ್ನೆಲೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ಬಳ್ಳಾರಿ ನಮಗೆ ಯಾವಾಗಲೂ ಒಳ್ಳೆಯದನ್ನೇ ಮಾಡಿದೆ ಎಂದರು. ಈಗಾಗಲೇ ಆನಂದ್ ಸಿಂಗ್ ನಮ್ಮ ಪಕ್ಷ ಸೇರಿದ್ದಾರೆ, ಇನ್ನೂ 20 ಜನ ಬಿಜೆಪಿ ಬಿಟ್ಟು ಹೊರ ಬರಲಿದ್ದಾರೆ ಎಂದು ಪರಮೇಶ್ವರ್ ಹೇಳಿದರು.  ಆನಂದ್ ಸಿಂಗ್ ಕಾಂಗ್ರೆಸ್ ಸೇರ್ಪಡೆಯಿಂದ ಯಾವುದೇ ಮುಜುಗರ ಅಗಿಲ್ಲ, ಒಂದು ವೇಳೆ ಜನಾರ್ಧನರೆಡ್ಡಿಯನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದರೆ ಮುಜುಗರವಾಗುತ್ತಿತ್ತು ಎಂದರು. ನಮ್ಮ ಪಕ್ಷದ ರಣನೀತಿಯನ್ನು ಮಾಧ್ಯಮದ ಎದುರು ಹೇಳಲಾಗುವುದಿಲ್ಲ ಎಂದ ಪರಮೇಶ್ವರ್, ಜನಾಶೀರ್ವಾದ ಯಾತ್ರೆ ಬೆನ್ನಲ್ಲೇ ಬೆಳಗಾವಿ ಭಾಗದಿಂದ ಎರಡನೇ ಯಾತ್ರೆಗೆ ಸಜ್ಜಾಗುತ್ತಿದ್ದೇವೆ ಎಂದು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

G.Parameshwara janashirvada ಮಾಧ್ಯಮ ಕೆಪಿಸಿಸಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ