ಹನಿ ಟ್ರಾಪ್ ಕಹಾನಿ

Honey trap: one arrested

10-02-2018

ಬೆಂಗಳೂರು: ಹನಿ ಟ್ರಾಪ್ ಮೂಲಕ ಉದ್ಯಮಿಗಳನ್ನು ಸುಲಿಗೆ ಮಾಡುತ್ತಿದ್ದ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ. ಈ ಸಂಬಂಧ ಮಂಜುನಾಥ್ ಎಂಬ ಆರೋಪಿಯನ್ನು ಬಂಧಿಸಿದ್ದು, ಈ ದಂಧೆಯಲ್ಲಿ ಅವನಿಗೆ ಸಾಥ್ ನೀಡುತ್ತಿದ್ದ ಆಯೆಷಾ ಎನ್ನುವವಳಿಗಾಗಿ ಶೋಧ ನಡೆಸಿದ್ದಾರೆ. ಹೇಗೋ ಮಾಡಿ ಕೆಲವು ಉದ್ಯಮಿಗಳ ನಂಬರ್ ಗಳನ್ನು ಪಡೆಯುತ್ತಿದ್ದ ಇವರು, ಅವರ ಫೋನ್ ಗೆ ಮಿಸ್ಡ್ ಕಾಲ್ ಕೊಟ್ಟು ಪರಿಚಯ ಮಾಡಿಕೊಳ್ಳುತ್ತಿದ್ದರು. ಮಾತಿನಲ್ಲೇ ಆವರನ್ನು ಮರುಳುಮಾಡುತ್ತಿದ್ದ ಆಯೆಷಾ, ಉದ್ಯಮಿಗಳನ್ನು ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದಳು. ಆ ನಂತರ, ಆರೋಪಿ ಮಂಜುನಾಥ್ ಅದೇ ಉದ್ಯಮಿಗಳನ್ನು ಕರೆಸಿಕೊಂಡು, ಈ ವಿಚಾರದ ಬಗ್ಗೆ ನಿಮ್ಮ ಮನೆಯವರಿಗೆ ಹೇಳುತ್ತೇನೆ ಎಂದು ಅವರನ್ನು ಹೆದರಿಸಿ ಲಕ್ಷಾಂತರ ರೂಪಾಯಿ ಹಣ ಕೀಳುತ್ತಿದ್ದ ಎಂದು ತಿಳಿದು ಬಂದಿದೆ.


ಸಂಬಂಧಿತ ಟ್ಯಾಗ್ಗಳು

Honey trap arrested ಉದ್ಯಮಿ ನಂಬರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ