ಮೇಘನಾ ಸಾವು: ತನಿಖೆ ಚರುಕು

Meghna suicide: notice issued to 5 students

09-02-2018

ಬೆಂಗಳೂರು: ರ‍್ಯಾಗಿಂಗ್‌ ನಿಂದ ವಿದ್ಯಾರ್ಥಿನಿ ಮೇಘನಾ ಆತ್ಮಹತ್ಯೆ ಪ್ರಕರಣ ಸಂಬಂಧ ಇಬ್ಬರು ವಿದ್ಯಾರ್ಥಿನಿಯರು ಸೇರಿ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಮೇಘನಾ ತರಗತಿ ವಿಭಾಗದ ಮುಖ್ಯಸ್ಥ ರಾಜಕುಮಾರ್, ಸಹಪಾಠಿಗಳಾದ ಸೌಧಾಮಿನಿ, ಸಂದೀಪ್, ನಿಖಿಲ್ ಹಾಗೂ ಸಂಧ್ಯಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಿರುವ ರಾಜರಾಜೇಶ್ವರಿನಗರ ಪೊಲೀಸರು ವಿಚಾರಣೆಗಾಗಿ ನೋಟಿಸ್ ಜಾರಿಗೊಳಿಸಿದ್ದಾರೆ.

ಪ್ರಕರಣ ದಾಖಲಿಸಿರುವ ಐವರ ಪರ ಅವರ ಕುಟುಂಬದವರಿಗೆ ನೋಟಿಸ್ ನೀಡಲಾಗಿದೆ. ಪ್ರಕರಣದ ಸಂಬಂಧ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುವುದು ಎಂದು ಡಿಸಿಪಿ ಅನುಚೇತ್ ತಿಳಿಸಿದ್ದಾರೆ. ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿಗಳ ಚುನಾವಣೆಯಲ್ಲಿ ಸೋತ ಮೇಘನಾಳನ್ನು ಎದುರು ಪಕ್ಷದವರು ಹಂಗಿಸಿದ್ದಕ್ಕೆ ಮನನೊಂದು ಕಳೆದ ಮಂಗಳವಾರ ತಮ್ಮ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಕಾಲೇಜಿನಲ್ಲಾದ ರ‍್ಯಾಗಿಂಗ್‌ ಆತ್ಮಹತ್ಯೆಗೆ ಕಾರಣ ಎಂದು ಪೋಷಕರು ದೂರು ನೀಡಿದ್ದು, ಅದನ್ನು ಆಧರಿಸಿ ತನಿಖೆ ಮುಂದುವರಿಸಿದ್ದೇವೆ, ವಾಟ್ಸ್ ಆಪ್‍ನಲ್ಲಿ ಶುರುವಾದ ಜಗಳ, ನಂತರ ಮುಖಾಮುಖಿಯಾಗಿ ನಡೆದಿತ್ತು ಎಂಬ ಮಾಹಿತಿ ಸಿಕ್ಕಿದೆ' ಎಂದರು.

ಜಗಳದ ನಂತರ ಎದುರಾಳಿ ಗುಂಪಿನವರು, ರ‍್ಯಾಗಿಂಗ್‌ ಬಗ್ಗೆ ಪರಸ್ಪರ ಮಾತನಾಡಿರುವ ವಿಡಿಯೋ ಸಹ ಸಿಕ್ಕಿದೆ. ಈ ಎರಡೂ ವಿಡಿಯೋಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಿದ್ದೇವೆ' ಅಲ್ಲಿಂದ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ragging suicide ವಿಧಿವಿಜ್ಞಾನ ಮುಖಾಮುಖಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ