ಅರಿವಿಲ್ಲದ ಹೆಣ್ಣು, ಕ್ರಿಮಿನಲ್ ಗಂಡು...

Love Sex Aur Dhokha..!

09-02-2018

ಬೆಂಗಳೂರು: ಸಾಫ್ಟ್ ವೇರ್ ಎಂಜಿನಿಯರ್ ಯುವತಿಯೊಬ್ಬಳನ್ನು ವೈವಾಹಿಕ ಜಾಲ ತಾಣದ ಮೂಲಕ ಪರಿಚಯ ಮಾಡಿಕೊಂಡು ಮದುವೆಯಾಗುವುದಾಗಿ ನಂಬಿಸಿ ಯುವಕನೊಬ್ಬ ಲೈಂಗಿಕವಾಗಿ ಬಳಸಿಕೊಂಡು ವಂಚಿಸಿರುವ ಪ್ರಕರಣ ಮಾರತ್ ಹಳ್ಳಿಯಲ್ಲಿ ವರದಿಯಾಗಿದೆ. ಈ ಸಂಬಂಧ ತೆಲಂಗಾಣ ಮೂಲದ ಸಾಫ್ಟ್ ವೇರ್ ಎಂಜಿನಿಯರ್ ನಾಗಾರ್ಜುನ(25)ನನ್ನು ಬಂಧಿಸಲಾಗಿದೆ. ನಗರದ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತಿದ್ದ ನಾಗಾರ್ಜುನ ಎನ್ನುವನು ನನ್ನನ್ನು ಮ್ಯಾಟ್ರಿಮೊನಿ ವೆಬ್ ಸೈಟ್ ಮೂಲಕ ಪರಿಚಯ ಮಾಡಿಕೊಂಡು ಮದುವೆಯಾಗುತ್ತೇನೆ ಎಂದು ನಂಬಿಸಿದ್ದ. ನಂತರ ಭೇಟಿ ನೆಪದಲ್ಲಿ ಹೋಟೆಲ್ ಒಂದಕ್ಕೆ ಕರೆಸಿಕೊಂಡು ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದ. ಮತ್ತೊಮ್ಮೆ ಹೈದರಾಬಾದ್ ನಲ್ಲಿರುವ ನಮ್ಮ ಮನೆಗೆ ಬಂದು ಮತ್ತೆ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಅದರ ವಿಡಿಯೊ ಕೂಡ ಮಾಡಿಕೊಂಡು ಬಳಿಕ ನನ್ನನ್ನು ನಿರ್ಲಕ್ಷ್ಯ ಮಾಡಿ ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಯುವತಿ ದೂರು ನೀಡಿದ್ದಳು.


ಸಂಬಂಧಿತ ಟ್ಯಾಗ್ಗಳು

Dhoka Engineer ಸಾಫ್ಟ್ ವೇರ್ ನಿರ್ಲಕ್ಷ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ