ತಾಳ್ಮೆ ಕೈ ಕೊಡ್ತಾ ಕುಮಾರಣ್ಣಾ?

kumaraswamy anger in vikas yatra?

09-02-2018

ಮಂಡ್ಯ: ವಿಕಾಸ ಯಾತ್ರೆ ವೇಳೆ ಹೆಚ್.ಡಿ.ಕುಮಾರ ಸ್ವಾಮಿ ಜೆಡಿಎಸ್ ಮುಖಂಡನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾದ ವಿಡಿಯೊ ವೈರಲ್ ಆಗಿದೆ. ಜೆಡಿಎಸ್ ಪಕ್ಷದ ವಿಕಾಸ ಯಾತ್ರೆ, ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮಕ್ಕೆ ಬರುತ್ತಿದ್ದಂತೆ ಕುಮಾರ ಸ್ವಾಮಿಯನ್ನು ಮುತ್ತಿಕೊಂಡ ಕಾರ್ಯಕರ್ತರು, ಜೆಡಿಎಸ್ನ ಸ್ಥಳೀಯ ಕಚೇರಿ ಉದ್ಘಾಟನೆ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಆದರೆ, ವಿಕಾಸ ವಾಹಿನಿ ವಾಹನದಿಂದ ಕೆಳಗಿಳಿಯಲು ನಿರಾಕರಿಸಿದ ಕುಮಾರ ಸ್ವಾಮಿ, ಕಾರ್ಯಕರ್ತರನ್ನು ನಿಯಂತ್ರಿಸದಿದ್ದಕ್ಕೆ ಗರಮ್ ಆಗಿದ್ದಾರೆ. ವಾಹನದಲ್ಲಿ ಜೊತೆಗಿದ್ದ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಅವರನ್ನು ನಿಂದಿಸಿದ್ದಾರೆ ಎನ್ನಲಾಗಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಸಂಬಂಧಿತ ಟ್ಯಾಗ್ಗಳು

H.D.Kumaraswamy JDS ವಿಕಾಸ ಯಾತ್ರೆ ಗರಮ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ