ಸಬ್ ರಿಜಿಸ್ಟ್ರಾರ್ ಗಳ ಗಬ್ಬು ಕೆಲಸ

FIR against sub registrar officers devanahalli

09-02-2018

ಬೆಂಗಳೂರು: ದೇವನಹಳ್ಳಿ ವಿಭಾಗದ ಮೂವರು ಸಬ್ ರಿಜಿಸ್ಟ್ರಾರ್ಗಳು ಸೇರಿದಂತೆ ಎಂಟು ಸರ್ಕಾರಿ ನೌಕರರ ಮೇಲೆ ಎಫ್ಐಆರ್ ದಾಖಲಾಗಿದೆ. ಆಸ್ತಿ ನೊಂದಣಿ ಸಂಬಂಧ ದಾಖಲೆಗಳನ್ನು ನಾಶ ಮಾಡಿದ್ದಾರೆ ಎಂಬ ಆರೋಪ ಮಾಡಿ ಶಿವಕುಮಾರ್ ಎಂಬುವರು ರಾಜ್ಯ ಮಾಹಿತಿ ಹಕ್ಕು ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಆರ್.ಟಿ.ಐ ಆಯುಕ್ತ ಕೃಷ್ಣಮೂರ್ತಿ, ರಾಜ್ಯ ಸಾರ್ವಜನಿಕ ದಾಖಲೆಗಳ ಕಾಯ್ದೆ 2010ರ ಪ್ರಕಾರ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು, ಪೊಲೀಸ್ ಇಲಾಖೆ ಎಫ್ಐಆರ್ ದಾಖಲಿಸಬೇಕೆಂದು ಶಿಫಾರಸು ಮಾಡಿದ್ದರು. ಅದರಂತೆ, ದೇವನಹಳ್ಳಿ ಠಾಣೆ ಪೊಲೀಸರು ಈ ಎಂಟು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಸದ್ಯದಲ್ಲೇ ಇವರನ್ನು ಬಂಧಿಸುವ ಸಾಧ್ಯತೆ ಇದೆ.


ಸಂಬಂಧಿತ ಟ್ಯಾಗ್ಗಳು

sub registrar FIR ದೇವನಹಳ್ಳಿ ಶಿಫಾರಸು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ