ತೆವಲು ಸುಬ್ಬನಿಗೆ ಬಿತ್ತು ಗೂಸ

A man caught by public while clicking girls photo

09-02-2018

ತುಮಕೂರು: ಮೊಬೈಲ್ ಫೋನ್ ನಲ್ಲಿ ಮಹಿಳೆಯರ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದ ಭೂಪ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದು, ಸಾರ್ವಜನಿಕರಿಂದ ಧರ್ಮದೇಟು ತಿಂದಿದ್ದಾನೆ. ನಗರದ ಪ್ರತಿಷ್ಠಿತ ಕಾಲೇಜೊಂದರ ಕಂಪ್ಯೂಟರ್ ಸೈನ್ಸ್ ವಿಭಾಗದ ಸಿಬ್ಬಂದಿ ಶಿವಕುಮಾರ್, ಸುಮ್ಮನಿರಲಾರದೆ ರಸ್ತೆಯಲ್ಲಿ ಹೋಗುವ ಮಹಿಳೆಯರ ಫೋಟೊ ತೆಗೆಯುತ್ತಿದ್ದ. ಈತನ ಕೃತ್ಯವನ್ನು ಗಮನಿಸಿದ ಸ್ಥಳೀಯರು ಇವನನ್ನು ತರಾಟೆ ತೆಗೆದುಕೊಂಡು ಮೊಬೈಲ್ ಪರಿಶೀಲಿಸಿದ್ದಾರೆ. ಇವನ ಫೋನಿನಲ್ಲಿ ಹಲವಾರು ಯುವತಿಯರ, ಉಪನ್ಯಾಸಕಿಯರ ಫೋಟೋಗಳು ಪತ್ತೆಯಾಗಿವೆ. ಈ ರೀತಿ ದುರ್ವರ್ತನೆ ಮುಂದುವರಿಸದಂತೆ ಬುದ್ಧಿ ಹೇಳಿ ಕಳುಹಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Photo Ladies ಕಂಪ್ಯೂಟರ್ ಮೊಬೈಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ