ಮಠಗಳ ವಿಚಾರಕ್ಕೆ ಕೈ ಹಾಕಲ್ಲ…

No intervention on religion issues

08-02-2018

ಬೆಂಗಳೂರು: ಧಾರ್ಮಿಕ ದತ್ತಿ ಕಾಯ್ದೆಗೆ ತಿದ್ದುಪಡಿ ತರುವ ಸಂಬಂಧ ಹೊರಡಿಸಿದ್ದ ಸುತ್ತೋಲೆ ವಾಪಸ್ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಪರಿಷತ್ತಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಪ್ರತಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಅವರ ನಿಲುವಳಿ ಸೂಚನೆಗೆ ಉತ್ತರಿಸಿದ ಅವರು, ರಾಜ್ಯ ಸರ್ಕಾರ, ಮಠ ಮಂದಿರಗಳ ವಿಚಾರಕ್ಕೆ ಕೈ ಹಾಕಲ್ಲ, ಸುತ್ತೋಲೆ ಪ್ರಕಟಣೆ ಬಗ್ಗೆ ಸರ್ಕಾರಕ್ಕೆ ಸೂಕ್ತ ಮಾಹಿತಿ ಇರಲಿಲ್ಲ, ಅಧಿಕಾರಿಗಳು ತಾವಾಗಿಯೇ ಹೊರಡಿಸಿದ್ದ ಕಾರಣ ಸುತ್ತೋಲೆ ವಾಪಸ್ ತೆಗೆದುಕೊಳ್ಳುವುದಾಗಿ ತಿಳಿಸಿದರು.

ಕೆ.ಎಸ್.ಈಶ್ವರಪ್ಪ ಮಾತನಾಡಿ, ರಾಜ್ಯಸರ್ಕಾರದ ಹಿಂದೂ ವಿರೋಧಿ ನೀತಿ ಸರಿಯಲ್ಲ, ಹೀಗಾಗಿ ಸರ್ಕಾರದ ದೋರಣೆ ಖಂಡಿಸಿ ಸದನದಿಂದ ಹೊರ ನಡೆಯುವುದಾಗಿ ಹೇಳಿದರು. ಈ ವೇಳೆ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. 
ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, “ಹಿಂದೂಗಳ ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ನಿಯಂತ್ರಣ ಮಾಡುವ ಹುನ್ನಾರ ನಡೆಸಿರುವುದು ಸರ್ಕಾರದ ಹಿಂದೂ ವಿರೋಧಿ ಧೋರಣೆಯನ್ನು ಮತ್ತೆ ಸಾಬೀತುಪಡಿಸಿದೆ”ಎಂದು ಹೇಳಿದ್ದಾರೆ. ಈ ಮುಖ್ಯಮಂತ್ರಿಗೆ ಕನಿಷ್ಟ ಸಂವೇದನೆಯಾದರೂ ಇದ್ದಿದ್ದರೆ, ಹಿಂದೂಗಳನ್ನು ಈ ರೀತಿ ಲಘುವಾಗಿ ಪರಿಗಣಿಸುತ್ತಿರಲಿಲ್ಲ ಎಂದು ಯಡಿಯೂರಪ್ಪ ಕಿಡಿಕಾರಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ