ಕರಾವಳಿಗೆ ಅಮಿತ್ ಷಾ ಅಲೆ..!

Amit shah visits to karavali

08-02-2018

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ತಂದುಕೊಡಲು ಶತಪ್ರಯತ್ನ ಮಾಡುತ್ತಿರುವ ಅಮಿತ್ ಷಾ, ಕೆಲ ದಿನಗಳಿಂದ ಕೋಮುದಳ್ಳುರಿಗೆ ಸಿಲುಕಿರುವ ಕರಾವಳಿ ಪ್ರದೇಶಕ್ಕೆ ಇದೇ ತಿಂಗಳ 18 ಮತ್ತು 19 ರಂದು ಭೇಟಿ ನೀಡಲಿದ್ದಾರೆ.

ಫೆಬ್ರವರಿ 18ರ ಸಂಜೆ ದೆಹಲಿಯಿಂದ ನೇರವಾಗಿ ಮಂಗಳೂರಿಗೆ ಆಗಮಿಸಲಿರುವ ಅಮಿತ್ ಷಾ, ಅಲ್ಲಿಂದ ಪ್ರಮುಖ ಯಾತ್ರಾ ಸ್ಥಳ ಕುಕ್ಕೆ ಸುಬ್ರಮಣ್ಯಕ್ಕೆ ಆಗಮಿಸಲಿದ್ದಾರೆ. ರಾತ್ರಿ ಅಲ್ಲಿಯೇ ತಂಗಲಿರುವ ಅಮಿತ್ ಷಾ ಮರುದಿನ ದೇಗುಲಕ್ಕೆ ಭೇಟಿ ನೀಡಿ, ನಂತರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅಲ್ಲಿಂದ ಪುತ್ತೂರಿನ ವಿವೇಕಾನಂದ ಶಿಕ್ಷಣ ಸಂಸ್ಥೆಗೆ ತೆರಳಿ, ಅಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಬಂಟ್ವಾಳದಲ್ಲಿ ನಾರಿಶಕ್ತಿ ಸಮಾವೇಶ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಆ ಬಳಿಕ ಕಾಟಿಪಳ್ಳದಲ್ಲಿ ಇತ್ತೀಚೆಗೆ ಹತ್ಯೆಗೀಡಾದ ದೀಪಕ್ ರಾವ್ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ಬಳಿಕ ಸುರತ್ ಕಲ್ ನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ, ಅದೇ ದಿನ ಸಂಜೆ 5 ಗಂಟೆಗೆ ಮಲ್ಪೆ ಸಮುದ್ರ ತೀರದಲ್ಲಿ ಮೀನುಗಾರರನ್ನುದ್ದೇಶಿಸಿ ಅಮಿತ್ ಷಾ ಭಾಷಣ ಮಾಡಲಿದ್ದಾರೆ.


ಸಂಬಂಧಿತ ಟ್ಯಾಗ್ಗಳು

amith shah Krishana Mutt ಸಮುದ್ರ ಭಾಷಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ