ಈ ಊರಿನ ಜನರೆಲ್ಲ ಕೋಟ್ಯಧಿಪತಿಗಳೇ..

Richest village in india..!

08-02-2018

ಈ ಹಳ್ಳಿ ಇಡೀ ಏಷ್ಯಾ ಖಂಡದ ಅತ್ಯಂತ ಶ್ರೀಮಂತ ಗ್ರಾಮಗಳಲ್ಲಿ ಒಂದು. ಈ ಊರಿನಲ್ಲಿರುವವರೆಲ್ಲರೂ ಕೋಟ್ಯಧಿಪತಿಗಳು. ಇದು ಅರುಣಾಚಲ ಪ್ರದೇಶದ ಬೊಮ್ಜ ಗ್ರಾಮ. ಇತ್ತೀಚೆಗೆ, ರಕ್ಷಣಾ ಇಲಾಖೆ ಈ ಊರಿನವರಿಗಾಗಿ ಸುಮಾರು 41 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿತ್ತು. ಈ ಹಣ, ಈ ಊರಿನ ಗ್ರಾಮಸ್ಥರ ಭೂಮಿಯನ್ನು ಪಡೆದುಕೊಂಡಿದ್ದಕ್ಕಾಗಿ ನೀಡಿದ ಪರಿಹಾರದ ಮೊತ್ತ. ತವಾಂಗ್ ಪ್ರದೇಶದಲ್ಲಿ ಭಾರತೀಯ ಸೇನೆಯ ತುಕಡಿಗಳಿಗೆ ನೆಲೆ ಕಲ್ಪಿಸುವ ಸಲುವಾಗಿ, ಈ ಊರಿನಲ್ಲಿ ಸುಮಾರು 200 ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದೆ. ಹೀಗಾಗಿ, ಈ ಊರಿನವರಿಗೆ, ಅವರ ಭೂಮಿಯ ವಿಸ್ತೀರ್ಣ ಆಧರಿಸಿ ಒಂದು ಕೋಟಿ ರೂಪಾಯಿಗಳಿಂದ ಹಿಡಿದು 7 ಕೋಟಿ ರೂಪಾಯಿಗಳವರೆಗೆ ಪರಿಹಾರ ನೀಡಲಾಗಿದೆ.
 


ಸಂಬಂಧಿತ ಟ್ಯಾಗ್ಗಳು

Richest village ಅರುಣಾಚಲ ಪ್ರದೇಶ ಪರಿಹಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


message
  • maheshkumar
  • bA