ಕೇಂದ್ರದಿಂದ ನೆಲದ ಭಾಷೆಗೆ ತೊಡಕು?08-02-2018

ಚಾಮರಾಜನಗರ: ಕೇಂದ್ರದ ತಪ್ಪು ಹೆಜ್ಜೆಗಳಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುತ್ತಿದ್ದು, ಕೇಂದ್ರ ಸರ್ಕಾರ ನೆಲದ ಭಾಷೆಗೆ ಅಡ್ಡಿ ಉಂಟು ಮಾಡುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಕನ್ನಡ ಭಾಷೆಗೆ ಹಿನ್ನಡೆಯಾಗಿದೆ, ಇಂಗ್ಲಿಷ್ ಪ್ರಭಾವದಿಂದ ಬ್ಯಾಂಕ್ ಗಳಲ್ಲಿನ ಉದ್ಯೋಗಗಳು ಕನ್ನಡಿಗರ ಕೈತಪ್ಪುತ್ತಿವೆ, ಬ್ಯಾಂಕಿಂಗ್ ವ್ಯವಹಾರ ಕಡ್ಡಾಯವಾಗಿ ಕನ್ನಡದಲ್ಲಿರಬೇಕು ಎಂದು ಒತ್ತಾಯಿಸಿದರು. ಇಂದು ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಬುಟ್ಟಿಯೊಳಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಎಸ್.ಜಿ.ಸಿದ್ದರಾಮಯ್ಯ, ಬೆಂಗಳೂರಿನಲ್ಲಿ ಕನ್ನಡ ಉಳಿದಿರುವುದು ವಾಟಾಳ್ ನಾಗರಾಜ್ ಮತ್ತು ಡಾ.ರಾಜ್ ಕುಮಾರ್ ಅಂಥವರಿಂದ ಎಂದು ಅಭಿಪ್ರಾಯಪಟ್ಟರು.


ಸಂಬಂಧಿತ ಟ್ಯಾಗ್ಗಳು

S.G siddaramaiah kannada ಕೇಂದ್ರ ಸರ್ಕಾರ ಕಡ್ಡಾಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ