ಚಿಲ್ಲರೆ ಕಾಸಿಗಾಗಿ ಮಕ್ಕಳ ಭವಿಷ್ಯ ಹಾಳು… 

Mandya District Children

08-02-2018

ಮಂಡ್ಯ: ಹಣದಾಸೆಗಾಗಿ ಮಕ್ಕಳನ್ನು ನೀರಿಗಿಳಿಸಿ ಭಕ್ತರು ನದಿಗೆ ಎಸೆಯುವ ನಾಣ್ಯಗಳನ್ನು ಎತ್ತಲು ಬಳಸಿಕೊಳ್ಳುತ್ತಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀರಂಗಪಟ್ಟಣದ ಬಳಿ ಕಾವೇರಿ ನದಿ ಸ್ನಾನ ಘಟ್ಟದಲ್ಲಿ, ಮಕ್ಕಳನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ತಿಳಿದ ಮಂಡ್ಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು 8 ಮಕ್ಕಳನ್ನು ರಕ್ಷಿಸಿದ್ದಾರೆ. ಆದರೆ, ಆಂಧ್ರದ ಕಡಪ ಜಿಲ್ಲೆಯ ಮಟ್ಟೂರು ಗ್ರಾಮದ ಆರೋಪಿ ದಂಪತಿ, ಇವರೆಲ್ಲರೂ ನಮ್ಮ ಮಕ್ಕಳೇ ಎಂದು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮಕ್ಕಳನ್ನು ಬಾಲ ಮಂದಿರಕ್ಕೆ ಕಳುಹಿಸಿ ತನಿಖೆ ಮುಂದುವರಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

child abuse Kaveri river ಹಣದಾಸೆ ದಂಪತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ