ಅಸಲಿ-ನಕಲಿ ಮಿಕ್ಸ್ ಮ್ಯಾಚ್!

fake 500 notes 2 arrested

08-02-2018

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಾದ್ಯಂತ ಐನೂರು ರೂಪಾಯಿ ಮುಖಬೆಲೆ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದೆ. ಪಶ್ಚಿಮ ಬಂಗಾಳದಿಂದ ಖೋಟಾ ನೋಟುಗಳನ್ನು ತಂದು ಅಸಲಿ ನೋಟುಗಳ ನಡುವೆ ಇಟ್ಟು ವಂಚಿಸುತ್ತಿದ್ದ ಇಬ್ಬರು ಖದೀಮರು ಡಿಸಿಐಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಶಿವಮೊಗ್ಗ ಟಿಪ್ಪು ನಗರದ ಅಮ್ಜದ್ ಪಾಶ, ಮತ್ತು ಮೌಸಿನ್ ಖಾನ್ ಬಂಧಿತ ಆರೋಪಿಗಳು. ಬಂಧಿತರಿಂದ ಒಂದು ಲಕ್ಷ ರೂಪಾಯಿ ಅಸಲಿ ನೋಟು, ಐನೂರು ರೂಪಾಯಿ ಮುಖಬೆಲೆಯ 44 ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಅಂಗಡಿಯೊಂದರಲ್ಲಿ ನಕಲಿ ನೋಟು ಪತ್ತೆಯಾದ ನಂತರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ನಕಲಿ ನೋಟುಗಳ ಜಾಲ ಪತ್ತೆ ಹಚ್ಚಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Fake notes currencey ನಕಲಿ ಗಂಭೀರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ