ತೆರದ ಕೊಳವೆ ಬಾವಿ ಮುಚ್ಚಲು ಕೊಪ್ಪಳದಲ್ಲೊಂದು ವಿನೂತನ ಪ್ರಯತ್ನ...

Kannada News

27-04-2017

ಕೊಪ್ಪಳ : ತೆರದ ಕೊಳುವೆ ಬಾವಿ ಮುಚ್ಚಿದ್ರೆ 500 ರೂ ಬಹುಮಾನ ಘೋಷಣೆ ಮಾಡಿದ ರೈತ. ಗಂಗವಾತಿಯ ಶಿವಪ್ಪ ಚಳ್ಳಿಕೇರಿಯಿಂದ ಬಹುಮಾನ ಘೋಷಣೆ ಮಾಡಿದ್ದು ಕೊಳುವೆ ಬಾವಿಯಲ್ಲಿ ಕಾವೇರಿ ಮೃತಪಟ್ಟ ಹಿನ್ನಲೆ ಬಹುಮಾನ ಘೋಷಣೆ ಮಾಡಿದ ಶಿವಪ್ಪನವರು ಕಾವೇರಿ ಘಟನೆಯಿಂದ ಮನಸ್ಸಿಗೆ ನೋವಾಗಿ ಅಪಾಯಕಾರಿ ಕೊಳುವೆ ಬಾವಿ ಮುಚ್ವಲು ಈ ರೀತಿಯ ತೀರ್ಮಾನ ಕೈಗೊಂಡಿದ್ದಾರೆ. ಮೊದಲ 200 ಕೊಳುವೆ ಬಾವಿ ಮುಚ್ಚಿದವರಿಗೆ ಒಂದು ಲಕ್ಷದವರೆಗೂ ಬಹುಮಾನ ನೀಡಲು ಮುಂದಾಗಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಬಹುಮಾನ ಘೋಷಣೆ ಮಾಡಿದ ಶಿವಪ್ಪನವರು ಬಹುಮಾನಕ್ಕೆಂದೆ ಇಂದು ಬ್ಯಾಂಕಿನಲ್ಲಿ ಠೇವಣಿಯಾಗಿ ಹಣ ಇಡುತ್ತಿರೋ ಪ್ರಗತಿ ಪರ ರೈತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ