ಲಾಕಪ್ ನಲ್ಲಿ ಮಹಾರಾಜ..!

dongi maharaja in lockup..!

08-02-2018

ಚಿತ್ರದುರ್ಗ: ಪೂರ್ವ ಜನ್ಮದಲ್ಲಿ ನಾನು ರಾಜ ಮಾರ್ತಾಂಡ ವರ್ಮನಾಗಿದ್ದೆ ಎಂದು ಹೇಳಿಕೊಳ್ಳುತ್ತಿದ್ದ ತುಮಕೂರು ಜಿಲ್ಲೆ ಶಿರಾ ಮೂಲದಪ್ರದ್ಯುಮ್ನ ಯಾದವ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೊದಲು, ತಾನೊಬ್ಬ ಬಾಬಾ ಎಂದು ಹೇಳಿಕೊಂಡು ಹಲವರನ್ನು ವಂಚಿಸಿದ್ದ ಈತ, ಇತ್ತೀಚೆಗೆ ಚಿತ್ರದುರ್ಗದಲ್ಲಿ ಕಾಣಿಸಿಕೊಂಡಿದ್ದ. ಹೊಸದುರ್ಗ ತಾಲ್ಲೂಕಿನ ಗುಡ್ಡದ ನೇರಲಕೆರೆ ಗ್ರಾಮದ ಬೆಟ್ಟದ ಗುಹೆಯಲ್ಲಿ ಅಪಾರ ಸಂಪತ್ತಿದ್ದು, ನನ್ನ ಕನಸಿನಲ್ಲಿ ಗೋಚರವಾಗಿದೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ. ಈ ಜಾಗವನ್ನು ಉತ್ಖನನ ಮಾಡಿದರೆ ವಜ್ರ ವೈಡೂರ್ಯ ಸಿಗುತ್ತದೆ ಎಂದು ಬುರುಡೆ ಬಿಡುತ್ತಿದ್ದ ಇವನ ಢೋಂಗಿತನ ಅರಿತ ಗ್ರಾಮಸ್ಥರು, ಇವನ ತಲೆ ಮೇಲೆ ಮೊಟಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Fake Baba arrested ಢೋಂಗಿ ಗ್ರಾಮಸ್ಥ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ