ಕಾರು ಅಪಘಾತ-ಪ್ರಧಾನಿ ಮೋದಿ ಪತ್ನಿಗೆ ಗಾಯ

PM Narendra Modi

07-02-2018

ಜೈಪುರ: ರಾಜಸ್ಥಾನದ ಕೋಟ-ಚಿತ್ತೋರ್ ಹೆದ್ದಾರಿಯ ಕುಟುಂಡಾ ಗ್ರಾಮದ ಬಳಿ ಸಂಭವಿಸಿದ ಇನ್ನೋವಾ ಕಾರು ಅಪಘಾತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪರಿತ್ಯಕ್ತ ಪತ್ನಿ ಜಶೋದಾಬೆನ್ ಗಾಯಗೊಂಡಿದ್ದು, ಚಿತ್ತೋರ್ ಘಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಭೀಕರ ರಸ್ತೆ ಅಪಘಾತದಲ್ಲಿ ಕಾರು ಚಾಲಕ ಮೃತಪಟ್ಟಿದ್ದು, ಕಾರಿನಲ್ಲಿದ್ದ ಇನ್ನೊಬ್ಬ ಮಹಿಳೆ ಮತ್ತು ಮಗು ಸೇರಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಸಂಬಂಧಿಯೊಬ್ಬರ ಮದುವೆಗೆಂದು ರಾಜಸ್ಥಾನದ ಕೋಟಾಕ್ಕೆ ತೆರಳಿದ್ದ ಜಶೋದಾ ಬೆನ್, ಇನ್ನೋವಾ ಕಾರಿನಲ್ಲಿ ಗುಜರಾತ್ಗೆ ವಾಪಸ್ ಹೊರಟಿದ್ದರು.


ಸಂಬಂಧಿತ ಟ್ಯಾಗ್ಗಳು

jashodaben Narendra modi ಅಪಘಾತ ರಾಜಸ್ಥಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ