ಸಣ್ಣ ಕೈಗಾರಿಕೆ ಪುನಶ್ಚೇತನಕ್ಕೆ ಆದ್ಯತೆ…

Small industry prefers to revive...

07-02-2018

ಬೆಂಗಳೂರು: ರಾಜ್ಯದಲ್ಲಿ ಮುಚ್ಚಿಹೋಗಿರುವ ಸಾವಿರಾರು ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕಾಗಿ ಈಗಿರುವ ನಿಯಮಾವಳಿ ಸಡಿಲಿಸಿ ಆರ್ಥಿಕ ನೆರವು ನೀಡುವಂತೆ ಆರ್.ಬಿ.ಐಗೆ ಪತ್ರ ಬರೆಯಲು ಸರ್ಕಾರ ನಿರ್ಧರಿಸಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ವಿಧಾನಸಭೆಯಲ್ಲಿ ಹೇಳಿದ್ದಾರೆ.
ಬಿಜೆಪಿ ಸದಸ್ಯ ಉಮೇಶ್ ಕತ್ತಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೇಶದಲ್ಲಿನ ಸಣ್ಣ ಕೈಗಾರಿಕೆಗಳು ರೋಗಗ್ರಸ್ತವಾಗಿವೆ ಎಂಬ ಕಾರಣಕ್ಕಾಗಿಯೇ ಆರ್.ಬಿ.ಐ 2006-07 ರಲ್ಲಿ ಅಧ್ಯಯನ ನಡೆಸಿ ಪುನಶ್ಚೇತನಕ್ಕೆ ನೆರವು ನೀಡಲು ಮುಂದಾಗಿತ್ತು.

ಕಡಿಮೆ ಬಡ್ಡಿದರದ ಸಾಲ ನೀಡುವುದು, ಬಾಕಿ ಇರುವ ಸಾಲವನ್ನು ಧೀರ್ಘಾವಧಿ ಸಾಲವನ್ನಾಗಿ ಪರಿವರ್ತಿಸುವುದು, ರಾಜ್ಯ ಹಾಗೂ ಕೇಂದ್ರಸರ್ಕಾರಗಳು ಸಣ್ಣ ಕೈಗಾರಿಕೆಗಳ ಉತ್ಪನ್ನಗಳನ್ನು ಖರೀದಿಸುವುದೂ ಸೇರಿದಂತೆ ಹಲವು ರೀತಿಯ ಅನುಕೂಲತೆಗಳನ್ನು ಘೋಷಿಸಲಾಗಿತ್ತು. ಆದರೆ, ಆರ್.ಬಿ.ಐ ನಿಗದಿ ಪಡಿಸಿದ ನಿಯಮಾವಳಿಗಳ ವ್ಯಾಪ್ತಿಯಲ್ಲಿ ರಾಜ್ಯದ ಹಲವು ಸಣ್ಣ ಕೈಗಾರಿಕೆಗಳು ಬರಲಿಲ್ಲ, ಹೀಗಾಗಿ ಬಹುತೇಕರಿಗೆ ಅನುಕೂಲವಾಗಲಿಲ್ಲ, ಇದೇ ಕಾರಣಕ್ಕಾಗಿ ಆರ್.ಬಿ.ಐ ರೂಪಿಸಿರುವ ನಿಯಮಾವಳಿ ಸಡಿಲಗೊಳಿಸಬೇಕು ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ