ರಮ್ಯಾಗೆ ಉಮಾಶ್ರೀ ಬುದ್ಧಿವಾದ..!

Tweeter war: Umashree reaction on Ramya

07-02-2018

ಶಿವಮೊಗ್ಗ: ಪ್ರತ್ಯೇಕ ನಾಡ ಧ್ವಜ ಕುರಿತು ಧ್ವಜ ವಿನ್ಯಾಸ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಮಿತಿಯ ವರದಿಯಲ್ಲಿ ಏನಿದೆ ಎಂಬುದು ತಿಳಿದಿಲ್ಲ, ಏಕಾಏಕಿ ಕನ್ನಡ ಧ್ವಜ ಬದಲಾವಣೆ ಬಗ್ಗೆ ನಿಲುವು ಪ್ರಕಟಿಸುವುದು ಸಮಂಜಸವಲ್ಲ, ಸಾರ್ವಜನಿಕವಾಗಿ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ರಾಜ್ಯದ ಎಲ್ಲ ಶಾಲೆಗಳಲ್ಲಿ ಕನ್ನಡ ಭಾಷೆ ಕಡ್ಡಾಯಕ್ಕೆ ರಾಜ್ಯಸರ್ಕಾರ ಬದ್ಧವಾಗಿದೆ ಎಂದ ಉಮಾಶ್ರೀ, ನಾಟಕ ಅಕಾಡೆಮಿ ಲಾಂಛನ ಬದಲಾಗಿಲ್ಲ, ಫಲಕದ ವಿನ್ಯಾಸ ಮಾತ್ರ ಬದಲಿಸಲಾಗಿದೆ, ಹಿಂದೆಯೂ 5 ಬಾರಿ ಫಲಕದ ವಿನ್ಯಾಸ ಬದಲಿಸಲಾಗಿದೆ ಎಂದು ತಿಳಿಸಿದರು. ತೇರದಾಳ ನನ್ನ ಕ್ಷೇತ್ರ, ಅಲ್ಲಿಂದಲೇ ಎರಡು ಬಾರಿ ಆಯ್ಕೆಯಾಗಿದ್ದೇನೆ, ಜನರ ನಿರೀಕ್ಷೆಯಂತೆ ಕೆಲಸ ಮಾಡಿದ್ದು, ಆ ಕ್ಷೇತ್ರದಲ್ಲೇ ಕಣಕ್ಕಿಳಿಯುತ್ತೇನೆ ಎಂದು ಉಮಾಶ್ರೀ ತಿಳಿಸಿದರು.

ಬಿಜೆಪಿಯವರ ಪರಿವರ್ತನಾ ಯಾತ್ರೆ ಸಮಾರೋಪದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯಸರ್ಕಾರದ ವಿರುದ್ಧ ‘ಪರ್ಸೆಂಟೇಜ್ ಪದ ಬಳಕೆ ಮಾಡಿದ್ದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಉಮಾಶ್ರೀ, ಗೌರವಯುತ ಹುದ್ದೆಯಲ್ಲಿರುವ ಯಾರೇ ಆದರೂ ಗಂಭೀರವಾಗಿ ಮಾತನಾಡಬೇಕು, ಸೂಕ್ತ ದಾಖಲೆಗಳನ್ನಿಟ್ಟುಕೊಂಡು ಆರೋಪ ಮಾಡಬೇಕು ಎಂದರು.  ಇದೇ ವೇಳೆ ಮಾಜಿ ಸಂಸದೆ ರಮ್ಯಾಗೂ ಪರೋಕ್ಷವಾಗಿ ಬುದ್ಧಿವಾದ ಹೇಳಿದ ಸಚಿವೆ ಉಮಾಶ್ರೀ, ‘ಸಿನಿಮಾಗೂ ರಾಜಕಾರಣಕ್ಕೂ ವ್ಯತ್ಯಾಸವಿದೆ. ಜನ ನಮ್ಮನ್ನು ಗಮನಿಸುತ್ತಿರುತ್ತಾರೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು, ಗೌರವಾನ್ವಿತ ಹುದ್ದೆಯಲ್ಲಿರುವವರ ಬಗ್ಗೆ ಹಗುರವಾಗಿ ಮಾತನಾಡಬಾರದು’ ಎಂದರು.


ಸಂಬಂಧಿತ ಟ್ಯಾಗ್ಗಳು

Umashree separate flag ರಾಜಕಾರಣ ಗೌರವಾನ್ವಿತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ