ಶಾಸಕರ ಮೇಲೆ ಗಂಭೀರ ಆರೋಪ

Nandish reddy serious allegation on bhairathi basavaraj

07-02-2018

ಬೆಂಗಳೂರು: ಬೆಂಗಳೂರಿನ ಕೆ.ಆರ್.ಪುರಂ ಕ್ಷೇತ್ರದ ಶಾಸಕ ಭೈರತಿ ಬಸವರಾಜ್ ಮತ್ತು ಬೆಂಬಲಿಗರು ಕಳೆದ ನಾಲ್ಕೂವರೆ ವರ್ಷಗಳಲ್ಲಿ 102 ಕೊಲೆಗಳನ್ನು ಮಾಡಿದ್ದಾರೆ ಎಂದು ಮಾಜಿ ಶಾಸಕ ಬಿಜೆಪಿಯ ನಂದೀಶ್ ರೆಡ್ಡಿ ಗಂಭೀರ ಅರೋಪ ಮಾಡಿದ್ದಾರೆ. ಈ ಕುರಿತಂತೆ ವಿಧಾನಸೌಧದಲ್ಲಿ ಮಾತನಾಡಿದ ನಂದೀಶ್ ರೆಡ್ಡಿ, ಶಾಸಕ ಭೈರತಿ ಬಸವರಾಜ್ ರೌಡಿಯಂತೆ ವರ್ತಿಸುತ್ತಿದ್ದು, ಕೆ.ಆರ್.ಪುರಂ ಕ್ರೈಂ ಕ್ಷೇತ್ರವಾಗಿದೆ, ಇಲ್ಲಿ 100ಕ್ಕೂ ಹೆಚ್ಚು ಅತ್ಯಾಚಾರಗಳು, 200ಕ್ಕೂ ಹೆಚ್ಚು ಸರಗಳ್ಳತನಗಳಾಗಿದ್ದು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಿದ್ದಾರೆ. ಕೆ.ಆರ್.ಪುರಂ ಕ್ಷೇತ್ರದ ಅಭಿವೃದ್ಧಿಗೆ 1ಸಾವಿರ ಕೋಟಿಗೂ ಹೆಚ್ಚಿನ ಹಣ ಬಿಡುಗಡೆಯಾಗಿದ್ದು, ಇದರಲ್ಲಿ 600 ಕೋಟಿ ರೂಪಾಯಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದಿರುವ ನಂದೀಶ್ ರೆಡ್ಡಿ, ಶಾಸಕ ಭೈರತಿ ಬಸವರಾಜ್ ನೂರಾರು ಕೋಟಿ ರೂಪಾಯಿ ಗುಳುಂ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Byrathi basavaraj Nandiesha Reddy ಭ್ರಷ್ಟಾಚಾರ ಅರೋಪ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ